`ಹಿಂದಿರುವ ಬಾಲಕನೇ ಪಕ್ಷವನ್ನು ಮುಗಿಸುತ್ತಾನೆ ಎಂದು ಕರುಣಾನಿಧಿ ಅಂದುಕೊಂಡಿರಲಿಕ್ಕಿಲ್ಲ’ : ವರ್ಮಾ ಟ್ವೀಟ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಪಕ್ಷ ಅಭೂತಪೂರ್ವ ಗೆಲುವನ್ನು ಸಾಧಿಸಿದ ಬಳಿಕ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಈ ನಡುವೆ ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ವಿಭಿನ್ನ ರೀತಿಯಲ್ಲೇ ವಿಶ್ಲೇಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ವಿಜಯ್ ಅವರ ಹಳೆಯ ಫೋಟೋವನ್ನು ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ ವಿಭಿನ್ನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬಾಲಕ ವಿಜಯ್ ಹಾಗೂ `ಕಲೈಂಜರ್’ ಎಂದೇ ಖ್ಯಾತರಾದ ಡಿಎಂಕೆ ಪಕ್ಷದ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇದ್ದಾರೆ. ಜೊತೆಗೆ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಹಾಗೂ ತಾಯಿ ಶೋಭಾ ಅವರು ಕೂಡಾ ಕಾಣುತ್ತಿದ್ದಾರೆ. ಕರುಣಾನಿಧಿ ರಿಬ್ಬನ್ ಕತ್ತರಿಸುವ ಫೋಟೋ ಇದು.
ಈ ಫೋಟೋವನ್ನು ಹಂಚಿಕೊಂಡಿರುವ ರಾಮ್‍ಗೋಪಾಲ್ ವರ್ಮಾ, ‘ತನ್ನ ಹಿಂದಿರುವ ಹುಡುಗ ಮುಂದೊಂದು ದಿನ ತಮ್ಮ ಪಕ್ಷವನ್ನು ಮುಗಿಸಿ ಬಿಡುತ್ತಾನೆ ಎಂದು ಕರುಣಾನಿಧಿ ಕನಸು ಮನಸ್ಸಿನಲ್ಲೂ ಊಹಿಸಿರಲಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.
Kalaingar wouldn’t have dreamed that the kid behind him would one day destroy his party 🙏👍🔥 pic.twitter.com/7NNp6Ge73S
— Ram Gopal Varma (@RGVzoomin) May 5, 2026
ಆಡಳಿತರೂಢ ಡಿಎಂಕೆ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು. ಸ್ವತಃ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಎದುರು ಸೋತಿದ್ದರು.



