Bollywood

ಧುರಂಧರ್ ಗಳಿಕೆಯಲ್ಲಿ ಪಾಲು ಕೊಡಿ : ಇದು ಪಾಕಿಸ್ತಾನದ ಲಿಯಾರಿ ಜನರ ಒತ್ತಾಯ!

`ಧುರಂಧರ್: ದಿ ರಿವೆಂಜ್’ ನಿಂದ ಬಂದ ಗಳಿಕೆಯ ಪಾಲು ನಮಗೂ ಕೊಡಿ ಎಂದು ಕೇಳುತ್ತಿದ್ದಾರೆ ಪಾಕಿಸ್ತಾನದ ಲಿಯಾರಿ ಜನರು! ಕಾರಣ ಈ ಚಿತ್ರದ ಬಹುತೇಕ ಸನ್ನಿವೇಶದಲ್ಲಿ ಇರುವುದೇ ಈ ಲಿಯಾರಿಯ ಕಥೆ. ಹಾಗಾಗಿ ತಮ್ಮ ಕಥೆಯಿಂದ ಬಂದ ಲಾಭದಲ್ಲಿ ನಮಗೂ ಪಾಲು ಕೊಡಿ ಎನ್ನುವುದು ಇವರ ಒತ್ತಾಯ!

ಹೌದು, ರಣವೀರ್ ಸಿಂಗ್ ಅಭಿನಯದ ಧುರಂಧರ್ ಸರಣಿ ಬಾಕ್ಸ್ ಆಫೀಸ್‍ನಲ್ಲಿ ಕೊಳ್ಳೆ ಹೊಡೆಯುತ್ತಿದೆ. `ಧುರಂಧರ್: ದಿ ರಿವೆಂಜ್’ ಚಿತ್ರ ಜಾಗತಿಕವಾಗಿ 1,000 ಕೋಟಿ ರೂಪಾಯಿ ದಾಟಿದೆ. ಈ ಸರಣಿಯ ಪ್ರಮುಖ ಕಥೆ ಪಾಕಿಸ್ತಾನದ ಲಿಯಾರಿಯ ಸುತ್ತನೇ ಸುತ್ತುತ್ತದೆ.

ಸದ್ಯ ಆನ್‍ಲೈನ್‍ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳಲ್ಲಿ ಈ ಸಿನಿಮಾದಲ್ಲಿ ಲಿಯಾರಿಯ ಹೆಸರು ಹಾಗೂ ಹಿನ್ನೆಲೆ ಬಳಸಿರುವುದರಿಂದ ಇಲ್ಲಿನ ಜನರು ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಭಾರತ ಆರ್ಥಿಕ ಸಹಾಯ ನೀಡಿದರೆ ಇಲ್ಲಿನ ರಸ್ತೆ ಸೇರಿ ಮೂಲಸೌಕರ್ಯಗಳು ಸುಧಾರಿಸಬಹುದು ಎಂದು ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದಾಗಿದೆ.


ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಲಿಯಾರಿಯಲ್ಲಿ ನಡೆಯುವ ಗ್ಯಾಂಗ್ ನೆಟ್‍ವರ್ಕ್‍ಗಳನ್ನು ನಿರ್ವಹಿಸುವ ಭಾರತೀಯ ಗುಪ್ತಚರನ ಕಥೆಯೊಂದಿಗೆ ಸಾಗುತ್ತದೆ. ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಈ ಚಿತ್ರಗಳಲ್ಲಿ ನಟಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button