Bollywood

ಧುರಂಧರ್ 2 ಚಿತ್ರಕ್ಕೆ ಕಾನೂನು ಸಂಕಷ್ಟ : ಏನಿದು ವಿವಾದ? ಹೈಕೋರ್ಟ್ ಹೇಳಿದ್ದೇನು?

ಆದಿತ್ಯ ಧರ್, ರಣವೀರ್‌ ಸಿಂಗ್ ಅಭಿನಯದ ಸೂಪರ್‌ ಹಿಟ್ ಧುರಂಧರ್ 2 ಚಿತ್ರಕ್ಕೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಅನುಮತಿ ಇಲ್ಲದೆ ಹಾಡೊಂದನ್ನು ಬಳಸಿದ ಕಾರಣದಿಂದ ಆದಿತ್ಯ ಧರ್ ಒಡೆತನದ ನಿರ್ಮಾಣ ಸಂಸ್ಥೆ B62 ಸ್ಟುಡಿಯೋಸ್ ವಿರುದ್ಧ ತ್ರಿಮೂರ್ತಿ ಫಿಲ್ಮ್ಸ್ ಮೊಕದ್ದಮೆ ಹೂಡಿದೆ. ಧುರಂಧರ್ 2 ಚಿತ್ರದಲ್ಲಿ `ಓಯೇ ಓಯೇ’ ಹಾಡನ್ನು ಬಳಸಲಾಗಿದೆ. ಈ ಹಾಡಿನ ಹಕ್ಕು ತ್ರಿಮೂರ್ತಿ ಫಿಲ್ಸ್ಮ್‌ ಕೈಯಲ್ಲಿದೆ. ಈ ಹಾಡನ್ನು ಅಥವಾ ಅದಕ್ಕೆ ಹೋಲುವ ಆವೃತ್ತಿಯನ್ನು ಅಗತ್ಯ ಪರವಾನಗಿಗಳು ಅಥವಾ ಅನುಮತಿಗಳನ್ನು ಪಡೆಯದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ತನ್ನ ಅರ್ಜಿಯಲ್ಲಿ ಆರೋಪಿಸಿದೆ.

ಹೈಕೋರ್ಟ್ ಹೇಳಿದ್ದೇನು?

ಈ ಅರ್ಜಿಯನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ಈ ಹಕ್ಕುಸ್ವಾಮ್ಯ ವಿವಾದವನ್ನು ಆಲಿಸಿ ಮಧ್ಯಸ್ಥಿಕೆಗೆ ಆದೇಶಿಸಿದೆ. ನ್ಯಾಯಾಧೀಶ ತುಷಾರ್ ರಾವ್ ಗೆಡೆಲಾ ಅವರು ವಿವಾದವು ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳಂತೆ ಕಾಣುತ್ತದೆ. ಹೀಗಾಗಿ ಕ್ಷಕೀದಾರರು ರಾಯಲ್ಟಿ ಹಾಗೂ ಪರಿಹಾರದಂತಹ ಸಮಸ್ಯೆಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥ ಮಾಡಬಹುದು ಎಂದು ಸೂಚಿಸಿದರು.

ಈ ಹಾಡು ರಾಜೀವ್ ರಾಯ್ ಅವರ 1989ರ ತ್ರಿದೇವ್‌ ಚಿತ್ರದ್ದಾಗಿದೆ. ಆನಂದ್ ಬಕ್ಷಿ ಅವರ ಸಾಹಿತ್ಯಕ್ಕೆ ಕಲ್ಯಾಣ್‌ಜಿ-ಆನಂದ್‌ಜಿ ಮತ್ತು ವಿಜು ಶಾ ಸಂಗೀತ ಸಂಯೋಜಿಸಿದ್ದರು. ಈ ಹಾಡನ್ನು ಅಮಿತ್ ಕುಮಾರ್ ಮತ್ತು ಸಪ್ನಾ ಮುಖರ್ಜಿ ಹಾಡಿದ್ದರು. 1989ರಲ್ಲಿ ತ್ರಿದೇವ್ ಚಿತ್ರವನ್ನು ಗುಲ್ಶನ್ ರಾಯ್ ಅವರು ತ್ರಿಮೂರ್ತಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಇವರ ಪುತ್ರ ರಾಜೀವ್ ರಾಯ್ ನಿರ್ದೇಶಿಸಿದ ಈ ಆಕ್ಷನ್-ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಸನ್ನಿ ಡಿಯೋಲ್, ಜಾಕಿ ಶ್ರಾಫ್, ನಸೀರುದ್ದೀನ್ ಶಾ, ಮಾಧುರಿ ದೀಕ್ಷಿತ್, ಸಂಗೀತಾ ಬಿಜ್ಲಾನಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಧುರಂಧರ್: ದಿ ರಿವೆಂಜ್ ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಬಿ 62 ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ರಣವೀರ್ ಸಿಂಗ್ , ಸಂಜಯ್ ದತ್, ಆರ್ ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button