ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿಘ್ನೇಶ್ ಶಿವನ್, ನಯನತಾರಾ ದಂಪತಿ
ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ದಂಪತಿ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ವಿಘ್ನೇಶ್ ನಿರ್ದೇಶನದ ಲವ್ ಇನ್ಶುರೆನ್ಸ್ ಕಂಪನಿ (LIK) ಬಿಡುಗಡೆಗೆ ಹಿನ್ನೆಲೆಯಲ್ಲಿ ಇವರಿಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಾಂಪ್ರದಾಯಿಕ ಉಡುಪು ಧರಿಸಿ ಬಂದಿದ್ದ ದಂಪತಿ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು.
திருப்பதியில் விக்கி நயன் தாரா 🫶😍🥰 pic.twitter.com/HrYoRzbanW
— Anshitha🫶💖🍉 (@Anshithaprincey) April 9, 2026
திருப்பதியில் நயன் விக்னேஷ் சிவனை வியந்து பார்த்த பக்தர்கள் 🫶🥰😍 pic.twitter.com/5uQxBS5xUU
— Anshitha🫶💖🍉 (@Anshithaprincey) April 9, 2026
ಲವ್ ಇನ್ಶುರೆನ್ಸ್ ಕಂಪನಿ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ. ಇದೊಂದು ಸೈನ್ಸ್ ಫಿಕ್ಷನ್ ರೋಮ್ಯಾಂಟಿಕ್ ಎಂಟಟೈನರ್ ಆಗಿದೆ. ಇದರಲ್ಲಿ ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ, ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಗೌರಿ ಕಿಶನ್, ಯೋಗಿ ಬಾಬು, ಸೀಮನ್, ಮಾಳವಿಕಾ, ಮೈಸ್ಕಿನ್, ಆನಂದರಾಜ್ ಮತ್ತು ಸುನಿಲ್ ರೆಡ್ಡಿ ಸೇರಿದಂತೆ ಇತರರು ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಸಂಗೀತ ಸಂಯೋಜಕ ಅನಿರುದ್ಧ್ ಮತ್ತೊಮ್ಮೆ LIK ಗಾಗಿ ನಿರ್ದೇಶಕ ವಿಘ್ನೇಶ್ ಅವರೊಂದಿಗೆ ಜೊತೆಯಾಗಿದ್ದಾರೆ. ರವಿ ವರ್ಮನ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.



