Bollywood

`ನನಗೀಗ 86 ವರ್ಷ. ಈಗಲೂ ದುಡಿಯುತ್ತಿದ್ದೇನೆ… ಡಾಕ್ಟರ್‌ಗೆ ನೀಡಲು ಹಣ ಬೇಕಲ್ವ?’ : ಖ್ಯಾತ ಹಾಸ್ಯನಟನ ಸಂಕಷ್ಟದ ಬದುಕು

ಬಾಲಿವುಡ್‍ನ ಹಿರಿಯ ಹಾಸ್ಯ ನಟರೊಬ್ಬರು ಈಗ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. 86ರ ಇಳಿ ವಯಸ್ಸಿನಲ್ಲೂ ಬದುಕಿನ ಬಂಡಿ ದೂಡುವ ಸಲುವಾಗಿ ಇವರು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ದಿನೇಶ್ ಹಿಂಗೂ ಹಿಂದಿಯ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 1967 ರಿಂದ 2010ರ ಅವಧಿಯಲ್ಲಿ ತಮ್ಮ ವೃತ್ತಿಜೀವನದ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಇವರು ಹೆಸರುವಾಸಿಯಾಗಿದ್ದಾರೆ. ಆದರೆ ವೈದ್ಯರಿಗೆ ನೀಡಲು ಹಣವಿಲ್ಲದ ಕಾರಣ ತಾನು ಈಗಲೂ ಕೆಲಸಕ್ಕೆ ಹೋಗಬೇಕಾಗಿದೆ ಎಂದು ಇವರು ಹೇಳಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಂ ಖಾತೆಯೊಂದರಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದಿನೇಶ್ ಹಿಂಗೂ ತಮ್ಮ ಸಂಕಷ್ಟದ ಬದುಕಿನ ಬಗ್ಗೆ ಮಾತನಾಡಿದ್ದಾರೆ. `ನನಗೆ 86 ವರ್ಷ. ನಾನು ಕೆಲವೊಮ್ಮೆ ಕೆಲಸಕ್ಕೆ ಹೋಗುತ್ತೇನೆ. ನಾನು ಇತ್ತೀಚೆಗೆ ಬಿದ್ದು ಗಾಯಗೊಂಡಿದ್ದೇನೆ. ಈಗ ಪರವಾಗಿಲ್ಲ. ಆದರೆ ವೈದ್ಯರ ಬಳಿಗೆ ಹೋಗಲು ನನಗೆ ಹಣ ಬೇಕು’ ಎಂದು ಇವರು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

 

View this post on Instagram

 

A post shared by Manish Dhadholi (@manishdhadholi)


ಮುಂದುವರಿದು `ಡಾಕ್ಟರ್ ಕೆಲವೊಮ್ಮೆ 5000 ರೂಪಾಯಿ ಕೇಳ್ತಾರೆ, ಕೆಲವೊಮ್ಮೆ 6000 ರೂಪಾಯಿ ಆಗುತ್ತದೆ. ಪೋಷಕ ಕಲಾವಿದರಿಗೆ ಅಷ್ಟು ಸಂಭಾವನೆ ಸಿಗುವುದಿಲ್ಲ. ನಾನು ಹೆಚ್ಚಾಗಿ ಕಪ್ಪು ಬಿಳುಪು ಚಿತ್ರಗಳಲ್ಲಿ ನಟಿಸಿದ್ದೇನೆ. ಜೊತೆಗೆ ಗುಜರಾತಿ ಮತ್ತು ರಾಜಸ್ಥಾನಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. 86ನೇ ವಯಸ್ಸಿನಲ್ಲಿಯೂ ಕೆಲವೊಮ್ಮೆ ಕೆಲಸಕ್ಕೆ ಹೋಗುತ್ತೇನೆ. ಡಾಕ್ಟರ್ ಹತ್ತಿರ ಹೋಗಲು ಹಣ ಬೇಕಲ್ವ? ಎಂದು ಇವರು ಹೇಳಿದ್ದಾರೆ.

ಬಾಜಿಗರ್, ಹಮ್ರಾಜ್, ಸಾಜನ್ ಮತ್ತು ನೋ ಎಂಟ್ರಿ ಮುಂತಾದ ಚಲನಚಿತ್ರಗಳಲ್ಲಿ ಇವರು ಗಮನಾರ್ಹ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ದೂರದರ್ಶನದ ಧಾರಾವಾಹಿಗಳನ್ನು ಒಳಗೊಂಡಂತೆ ಹಲವಾರು ಟಿವಿ ಧಾರಾವಾಹಿಗಳಲ್ಲಿಯೂ ಇವರು ಕೆಲಸ ಮಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button