News Roundup

ವಿಶ್ವ ಜಲ ದಿನ : ಮೂಡುಬಿದಿರೆ ಪುರಸಭೆಯಿಂದ ಮಳೆನೀರು ಸಂಗ್ರಹಣೆ ಕಾರ್ಯಾಗಾರ

ಮೂಡುಬಿದಿರೆ : ವಿಶ್ವ ಜಲದಿನದ ಅಂಗವಾಗಿ ಮೂಡುಬಿದಿರೆ ಪುರಸಭೆ ಹಾಗೂ ಸಿಡಿಡಿ ಇಂಡಿಯಾ ಸರ್ಕಾರೇತರ ಸಂಸ್ಥೆಯ ಸಹಭಾಗಿತ್ವದಲ್ಲಿ ಕಟ್ಟಡ ಇಂಜಿನಿಯರಿಂಗ್ ಕ್ಷೇತ್ರದವರಿಗೆ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ಕಾರ್ಯಾಗಾರ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕನ್ನಡಭವನದಲ್ಲಿ ನಡೆಯಿತು.

ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಥೋಮಸ್ ಉದ್ಘಾಟಿಸಿ, ತಮ್ಮ ಮನೆಯಲ್ಲಿ ಹಾಗೂ ಚರ್ಚಿನಲ್ಲಿ ಕೈಗೊಂಡಿರುವ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗಳ ಅನುಭವವನ್ನು ಹಂಚಿಕೊಂಡು, ಜಲ ಸಂರಕ್ಷಣೆ ಇಂದಿನ ಅವಶ್ಯಕತೆಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯಪಾಲಕ ನಿರ್ದೇಶಕ ಡಾ. ರಾಜೇಂದ್ರ ಕಲ್ಬಾವಿ, ಮಳೆನೀರು ಸಂಗ್ರಹಣೆ ವಿಧಾನಗಳು ಹಾಗೂ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದ್ಧತಿಗಳ ಕುರಿತು ವಿಡಿಯೋ ಮತ್ತು ಚಿತ್ರಗಳೊಂದಿಗೆ ಮಾಹಿತಿ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಿರ್ದೇಶಕ ಹಾಗೂ ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್ ಎ.ಬಿ. ಅವರು ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳು ಕಟ್ಟಡ ಅನುಮತಿ ನೀಡುವ ಸಂದರ್ಭದಲ್ಲಿ ಕಾನೂನುಬದ್ಧ ನಿಯಮಗಳನ್ನು ಪಾಲಿಸಿ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಸತೀಶ್ ಕೆ. ಭಂಡಾರಿ, ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್, ಸಿಡಿಡಿ ಇಂಡಿಯಾ ಸಂಸ್ಥೆಯ ಪ್ರೋಗ್ರಾಂ ಅಸೋಸಿಯೇಟ್ ಅಂಕಿತಾ, ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ ಎಸ್., ಇಂಜಿನಿಯರ್ ನಳಿನ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಸೇರಿದಂತೆ ಕಮ್ಯೂನಿಟಿ ಮೊಬಿಲೈಸರ್ ಆದ ಆಶಾ, ರಾಜೇಶ್ವರಿ, ಚಂದ್ರಿಕಾ, ಅಮಿತಾ ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಡಿಡಿ ಇಂಡಿಯಾ ಸಂಸ್ಥೆಯ ಹಿರಿಯ ಕಾರ್ಯಕ್ರಮ ಇಂಜಿನಿಯರ್ ಕಣ್ಣನ್, ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಶಿಲ್ಪಾ ಎಸ್. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಂಕಿತಾ ವಂದಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button