Kollywood
ವಿಜಯ್-ಸಂಗೀತ ವಿಚ್ಛೇದನ ಅರ್ಜಿ: ವಿಚಾರಣೆ ಮುಂದೂಡಿಕೆ
ತಮಿಳು ನಟ, ರಾಜಕಾರಣಿ ವಿಜಯ್ ಹಾಗೂ ಸಂಗೀತಾ ದಂಪತಿಯ ವಿಚ್ಛೇದನ ಅರ್ಜಿಯ ಕಾನೂನು ಕ್ರಮಗಳನ್ನು ಚೆಂಗಲ್ಪಟ್ಟು ನ್ಯಾಯಾಲಯ ಜೂನ್ 15ಕ್ಕೆ ಮುಂದೂಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನದ ಅರ್ಜಿಯಲ್ಲಿ ಸಂಗೀತಾ 2021ರಲ್ಲಿ ವಿಜಯ್ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ. ಜೊತೆಗೆ ತನ್ನನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸಂಗೀತಾ ಮತ್ತು ವಿಜಯ್ 1999ರಲ್ಲಿ ವಿವಾಹವಾಗಿದ್ದರು.
ಸದ್ಯ ವಿಜಯ್ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷ ಸ್ಥಾಪಿಸಿದ್ದಾರೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.



