Kollywood
ಹೆಣ್ಣು ಮಗುವನ್ನು ಸ್ವಾಗತಿಸಿ ಸ್ಟಾರ್ ಡೈರೆಕ್ಟರ್ ಅಟ್ಲಿ – ನಟಿ ಪ್ರಿಯಾ ದಂಪತಿ
ಸ್ಟಾರ್ ನಿರ್ದೇಶಕ ಅಟ್ಲಿ ಹಾಗೂ ನಟಿ ಪ್ರಿಯಾ ದಂಪತಿ ಎರಡನೇ ಮಗುವಿನ ಪೋಷಕರಾಗಿದ್ದಾರೆ. ಹೆಣ್ಣುಮಗುವಿನ ಜನನದ ಸುದ್ದಿಯನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಸಿನಿರಂಗದ ಅನೇಕರು ಶುಭಕೋರಿದ್ದಾರೆ.
2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಟ್ಲಿ ಹಾಗೂ ಪ್ರಿಯಾ 2023ರ ಜನವರಿಯಲ್ಲಿ ಮೊದಲ ಗಂಡು ಮಗುವನ್ನು ಸ್ವಾಗತಿಸಿದ್ದರು.
ರಾಜಾ ರಾಣಿ ಚಿತ್ರದ ಮೂಲಕ ನಿರ್ದೇಶಕರಾದ ಅಟ್ಲಿ, ನಂತರ ಥೇರಿ, ಮರ್ಸಲ್, ಬಿಗಿಲ್ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಜೊತೆಗೆ ಶಾರುಖ್ ಖಾನ್ ಅವರ ಜೊತೆಗೆ ಜವಾನ್ ಚಿತ್ರದೊಂದಿಗೆ ಬಾಲಿವುಡ್ನಲ್ಲಿ ಯಶಸ್ಸನ್ನು ಗಳಿಸಿದ್ದರು. ಸದ್ಯ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ರಾಕಾ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಪ್ರಿಯಾ ಕೂಡಾ ಹಲವು ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.



