Special Desk

ಶನಿ ಅಮಾವಾಸ್ಯೆ 2026 : ಶನಿ ದೋಷ ನಿವಾರಣೆಗೆ ಏನು ಮಾಡಬೇಕು?

ಶನಿ, ನ್ಯಾಯದ ದೇವರು. ಒಬ್ಬರ ಕರ್ಮಕ್ಕೆ ಅನುಗುಣವಾಗಿ ಶನಿ ದೇವನ ಪರಿಣಾಮಗಳು ಇರುತ್ತವೆ. ಮನುಷ್ಯ ಮಾಡುವ ಉತ್ತಮ ಕೆಲಸ ಹಾಗೂ ಕೆಟ್ಟ ಕೆಲಸಕ್ಕೆ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾನೆ. ಉತ್ತಮ ಕಾರ್ಯ, ದೇವತಾ ಕಾರ್ಯ, ಶನಿಯ ಪ್ರಾರ್ಥನೆಯ ಮೂಲಕ ಶನಿಯ ದೋಷದ ನಿವಾರಣೆ ಮಾಡಬಹುದು.

ಶನಿ ಅಮಾವಾಸ್ಯೆ 2026
ಶನಿ ದೋಷ ನಿವಾರಣೆಗೆ ಶನಿದೇವನಿಗೆ ಮೀಸಲಾಗಿರುವ ಜ್ಯೇಷ್ಠ ಅಮಾವಾಸ್ಯೆ ಮಂಗಳಕರ ಎಂದು ನಂಬಲಾಗುತ್ತದೆ. ಈ ಬಾರಿ 2026ರ ಮೇ 16ರ ಶನಿವಾರ ಶನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಶನಿ ದೋಷ ನಿವಾರಣೆಗೆ ಇದು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಈ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಜೊತೆಗೆ ಈ ದಿನ ಶನಿಜಯಂತಿಯೂ ಆಗಿರುವುದರಿಂದ ಈ ದಿನಕ್ಕೆ ಇನ್ನಷ್ಟು ಮಹತ್ವವಿದೆ.

ಈ ದಿನ ಶನಿ, ಹನುಮಂತ, ನವಗ್ರಹ, ಶಿವ, ಲಕ್ಷ್ಮೀನರಸಿಂಹ ದೇಗುಲಗಳಿಗೆ ಭೇಟಿ ನೀಡುವುದು ಉತ್ತಮ. ಈ ದೇಗುಲಗಳಲ್ಲಿ ಎಳ್ಳಿನ ಎಣ್ಣೆಯ ದೀಪ ಹಚ್ಚುವುದು ಮಂಗಳಕರ ಎಂಬ ನಂಬಿಕೆ ಇದೆ. ಮನೆಯಲ್ಲಿ ದೇವರಿಗೆ ತುಪ್ಪದ ದೀಪ, ಎಳ್ಳೆಣ್ಣೆಯ ದೀಪ ಹಚ್ಚಿ ದೇವಸ್ಥಾನಕ್ಕೂ ಭೇಟಿ ನೀಡುವುದೂ ಮಂಗಳಕರ ಎಂದೂ ಹೇಳಲಾಗುತ್ತದೆ. ಮನೆಯಲ್ಲಿ ಜನರು ಓಂ ಶನೈಶ್ಚರಾಯ ನಮಃ, ಓಂ ನಮಃ ಶಿವಾಯ, ಓಂ ಆಂಜನೇಯಾಯ ನಮಃ, ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ ಮಂತ್ರಗಳನ್ನು ಪಠಿಸುವ ಮೂಲಕ ದೇವರ ನಾಮಸ್ಮರಣೆಯನ್ನೂ ಮಾಡಬಹುದು. ಸಾಧ್ಯ ಇರುವವರು ಎಳ್ಳು, ಎಳ್ಳೆಣ್ಣೆ, ಕಪ್ಪು ಬಟ್ಟೆಯಂತಹ ದಾನವನ್ನೂ ಮಾಡಬಹುದು.

Show More

Related Articles

Leave a Reply

Your email address will not be published. Required fields are marked *

Back to top button