Automobile
ಹೆಚ್ಚುವರಿ ವೈಶಿಷ್ಟ್ಯ, ಸೌಕರ್ಯಗಳೊಂದಿಗೆ ಬೊಲೆರೊ ಕ್ಯಾಂಪರ್ ಮತ್ತು ಬೊಲೆರೊ ಪಿಕ್-ಅಪ್ ಬಿಡುಗಡೆ ಮಾಡಿದ ಮಹೀಂದ್ರಾ

ಮುಂಬೈ : ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ನವೀಕರಿಸಿದ ಕ್ಯಾಂಪರ್ ಮತ್ತು ಬೊಲೆರೊ ಪಿಕ್-ಅಪ್ ಶ್ರೇಣಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎರಡು ನವೀಕೃತ ಆವೃತ್ತಿಗಳು ವರ್ಧಿತ ದಕ್ಷತೆ, ಹೆಚ್ಚುವರಿ ವೈಶಿಷ್ಟ್ಯ ಹಾಗೂ ಸೌಕರ್ಯಗಳನ್ನು ಹೊಂದಿದೆ.

ಬೊಲೆರೊ ಕ್ಯಾಂಪರ್ ವಾಹನವು ವರ್ಧಿತ ಕಾರ್ಯಾಚರಣೆಯ ದಕ್ಷತೆಗಾಗಿ ಸುಧಾರಿತ iMAXX ಟೆಲಿಮ್ಯಾಟಿಕ್ಸ್ ಪರಿಹಾರದಿಂದ ಸಜ್ಜುಗೊಂಡಿದೆ. ಇದು ನೈಜ-ಸಮಯದ ವಾಹನ ಒಳನೋಟಗಳನ್ನು ಒದಗಿಸುತ್ತದೆ. ಇದಲ್ಲದೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಬೊಲೆರೊ ಪಿಕ್-ಅಪ್ ಕೂಡಾ ಸಾಕಷ್ಟು ಅಪ್ಡೇಟ್ಗಳನ್ನು ಕಂಡಿದೆ. ಹೊಸ ಫ್ರಂಟ್ ಲುಕ್ನೊಂದಿಗೆ, ಹೆಡ್ರೆಸ್ಟ್ನೊಂದಿಗೆ ಒರಗಿಕೊಳ್ಳುವ ಚಾಲಕ ಸೀಟು, ಅಗಲವಾದ ಕೋ-ಡ್ರೈವರ್ ಸೀಟ್ ಅನ್ನು ಹೊಂದಿದೆ. ಜೊತೆಗೆ ಇದರಲ್ಲಿ ಹೀಟಿಂಗ್ ಹಾಗೂ ಏರ್ ಕಂಡೀಷನಿಂಗ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಈ ಎರಡು ವಾಹನಗಳ ಎಕ್ಸ್ ಶೋರೂಮ್ ಬೆಲೆ ಇಂತಿದೆ…




