ಭಾರತ್ ಎನ್ಸಿಎಪಿಯಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆದ ರೆನಾಲ್ಟ್ ಡಸ್ಟರ್
ಹೊಸದಾಗಿ ಬಿಡುಗಡೆಯಾಗಿದ್ದ ರೆನಾಲ್ಟ್ ಡಸ್ಟರ್ ಎಸ್ಯುವಿ ಭಾರತ್ ನ್ಯೂ ಕಾರ್ ಅಸಸ್ಮೆಂಟ್ ಪ್ರೋಗ್ರಾಂ- ಭಾರತ್ ಎಸ್ಸಿಎಪಿ ಯಲ್ಲಿ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. 2026ರಲ್ಲಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ರೆನಾಲ್ಟ್ ಡಸ್ಟರ್ ವಯಸ್ಕ ಪ್ರಯಾಣಿಕರ ರಕ್ಷಣೆ ಹಾಗೂ ಮಕ್ಕಳ ಪ್ರಯಾಣಿಕರ ರಕ್ಷಣೆ ಎರಡೂ ವಿಭಾಗದಲ್ಲೂ ಬಲವಾದ ಅಂಕಗಳನ್ನು ಪಡೆದುಕೊಂಡಿದೆ.
ಭಾರತ್ ಎನ್ಸಿಎಪಿ ಅಂಕಿಅಂಶಗಳ ಪ್ರಕಾರ ರೆನಾಲ್ಟ್ ಡಸ್ಟರ್ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ರಲ್ಲಿ 30.49 ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ರಲ್ಲಿ 45 ಅಂಕಗಳನ್ನು ದಾಖಲಿಸಿದೆ.
Safety Ratings of RENAULT – DUSTER
The RENAULT – DUSTER has scored 5-Stars in Adult Occupant Protection (AOP) and 5-Stars in Child Occupant Protection (COP) in the recent Bharat NCAP crash tests.#bharatncap #safetyfirst #safetybeyondregulations #morestarssafercars #drivesafe pic.twitter.com/NrkaKUPnIT
— Bharat NCAP (@bncapofficial) April 20, 2026
ಎವಲ್ಯೂಷನ್, ಟೆಕ್ನೋ, ಐಕಾನಿಕ್ ಸೇರಿದಂತೆ ಬಹು ರೂಪಾಂತರಗಳ ಮೇಲೆ ಈ ಮೌಲ್ಯಮಾಪನವನ್ನು ನಡೆಸಲಾಗಿದೆ. ಸುರಕ್ಷತಾ ಸಾಧನಗಳ ವಿಷಯದಲ್ಲಿ 2026ರ ಹೊಸ ಡಸ್ಟರ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆರು ಏರ್ಬ್ಯಾಗ್ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.



