ಧುರಂಧರ್ನಲ್ಲಿ ಅಬ್ಬರಿಸಿದ್ದ ಅಕ್ಷಯ್ ಖನ್ನಾ ಈಗ ಶುಕ್ರಾಚಾರ್ಯ!
ಸೂಪರ್ ಹಿಟ್ ಧುರಂದರ್ 1 ಚಿತ್ರದಲ್ಲಿ ಅಕ್ಷಯ್ ಖನ್ನಾ ಅಬ್ಬರಿಸಿದ್ದರು. ಇಡೀ ಚಿತ್ರವನ್ನು ಆವರಿಸಿಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು. ಹೀಗೆ ಧುರಂಧರ್ನಲ್ಲಿ ಖಡಕ್ ವಿಲನ್ ಆಗಿದ್ದ ಅಕ್ಷಯ್ ಖನ್ನಾ ಈಗ ಶುಕ್ರಾಚಾರ್ಯರಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
ಮುಂಬರುವ ಮಹಾಕಾಳಿ ಚಿತ್ರದಲ್ಲಿ ಅಕ್ಷಯ್ ಖನ್ನಾ ಶುಕ್ರಾಚಾರ್ಯರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಶಾಂತ್ ವರ್ಮಾ ಅವರು ಅಕ್ಷಯ್ ಖನ್ನಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶೂಟಿಂಗ್ ಸೆಟ್ನ ಹೊಸ ಸ್ಟಿಲ್ ಅನ್ನು ಅನಾವರಣಗೊಳಿಸಿದರು.
Happy Birthday #AkshayeKhanna sir, a true actor who proves that real talent doesn’t need noise. Effortless screen presence, powerful performances, and unmatched class always stand out 🎭🎬
Its an absolute honour working with you. Can’t wait to show the world what we’ve created… pic.twitter.com/xiblaH8voc
— Prasanth Varma (@PrasanthVarma) March 28, 2026
From the cosmic womb of creation awakens the most FEROCIOUS SUPERHERO of the universe!
Introducing #BhoomiShetty as MAHA ❤️🔥 #Mahakali 🔱 @RKDStudios #RKDuggal @PujaKolluru #AkshayeKhanna#RiwazRameshDuggal @ThePVCU pic.twitter.com/MSyyW1oUK2
— Prasanth Varma (@PrasanthVarma) October 30, 2025
ಆರ್ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ವರ್ಮಾ ಶೋರನ್ನರ್ ಆಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೂಜಾ ಕೊಲ್ಲೂರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡತಿ ಭೂಮಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಶೀಘ್ರ ಘೋಷಣೆಯಾಗುವ ಸಾಧ್ಯತೆ ಇದೆ.



