Bollywood

ಧುರಂಧರ್‌ನಲ್ಲಿ ಅಬ್ಬರಿಸಿದ್ದ ಅಕ್ಷಯ್ ಖನ್ನಾ ಈಗ ಶುಕ್ರಾಚಾರ್ಯ!

ಸೂಪರ್ ಹಿಟ್ ಧುರಂದರ್ 1 ಚಿತ್ರದಲ್ಲಿ ಅಕ್ಷಯ್ ಖನ್ನಾ ಅಬ್ಬರಿಸಿದ್ದರು. ಇಡೀ ಚಿತ್ರವನ್ನು ಆವರಿಸಿಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು. ಹೀಗೆ ಧುರಂಧರ್‍ನಲ್ಲಿ ಖಡಕ್ ವಿಲನ್ ಆಗಿದ್ದ ಅಕ್ಷಯ್ ಖನ್ನಾ ಈಗ ಶುಕ್ರಾಚಾರ್ಯರಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.

ಮುಂಬರುವ ಮಹಾಕಾಳಿ ಚಿತ್ರದಲ್ಲಿ ಅಕ್ಷಯ್ ಖನ್ನಾ ಶುಕ್ರಾಚಾರ್ಯರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಶಾಂತ್ ವರ್ಮಾ ಅವರು ಅಕ್ಷಯ್ ಖನ್ನಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶೂಟಿಂಗ್ ಸೆಟ್‍ನ ಹೊಸ ಸ್ಟಿಲ್ ಅನ್ನು ಅನಾವರಣಗೊಳಿಸಿದರು.

ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್‌ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ವರ್ಮಾ ಶೋರನ್ನರ್ ಆಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೂಜಾ ಕೊಲ್ಲೂರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡತಿ ಭೂಮಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಶೀಘ್ರ ಘೋಷಣೆಯಾಗುವ ಸಾಧ್ಯತೆ ಇದೆ.

Show More

Related Articles

Leave a Reply

Your email address will not be published. Required fields are marked *

Back to top button