Special Desk

ಏರುತ್ತಿದೆ ಬಿಸಿಲ ಝಳ : ದೇಹವನ್ನು ತಂಪಾಗಿಸಲು ನೆರವಾಗುವ ಐದು ಆಹಾರಗಳು

ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ದೇಹವನ್ನು ತಂಪಾಗಿ ಇರಿಸಲು, ಚೈತನ್ಯದಿಂದ ಇರಲು ಹೆಚ್ಚುವರಿ ಜಲಸಂಚಯನ, ಪೋಷಣೆ ಅಗತ್ಯ. ಅಂತೆಯೇ ಬೇಸಿಗೆಯಲ್ಲಿ ಶಾಖವನ್ನು ಸೋಲಿಸಿ ದೇಹವನ್ನು ತಂಪಾಗಿಸಲು ನೆರವಾಗುವ ಐದು ಆಹಾರಗಳ ಬಗೆಗಿನ ಮಾಹಿತಿ ಇಲ್ಲಿದೆ.

Image Courtesy : www.pexels.com

ಸೌತೆಕಾಯಿ (ಮುಳ್ಳು ಸೌತೆ)
ಬೇಸಿಗೆಯಲ್ಲಿ ತಂಪಾಗಿರಲು ನೆರವಾಗುವ ಅತ್ಯುತ್ತಮ ಆಯ್ಕೆಗಳಲ್ಲಿ ಇದು ಕೂಡಾ ಒಂದು. ಇದು ಅತ್ಯುತ್ತಮ ಜಲಸಂಚಯನ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಬಹುತೇಕ ಭಾಗ ನೀರಿನಿಂದ ಕೂಡಿದ್ದು, ಇದು ಕಳೆದು ಹೋದ ದ್ರವವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಸುಲಭವಾಗಿ ನಿಮ್ಮ ಆಹಾರದಲ್ಲಿ ಹಾಗೂ ತ್ವಚೆಯ ಆರೈಕೆಯಲ್ಲಿ ಸೇರಿಸಬಹುದು.

Image Courtesy : www.pexels.com

ಕಲ್ಲಂಗಡಿ
ಬೇಸಿಗೆಯ ಮತ್ತೊಂದು ವರದಾನ ಇದು. ಈ ರಸಭರಿತ ಹಣ್ಣು ಕೂಡಾ ಸಾಕಷ್ಟು ನೀರಿನಾಂಶಗಳಿಂದ ಕೂಡಿರುತ್ತದೆ. ಇದು ಹೈಡ್ರೇಟೆಡ್ ಆಗಿರಲು ಅತ್ಯುತ್ತಮ ಆಯ್ಕೆಯಾಗಿದೆ. ಜೊತೆಗೆ ಇದು ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ.

Image Courtesy : www.pexels.com

ಎಳನೀರು
ಸೆಖೆಗೆ ಕಳೆದು ಹೋದ ದೇಹದ ದ್ರವವನ್ನು ಮತ್ತೆ ತುಂಬಿಸಲು ಎಳನೀರು ಕೂಡಾ ಸಹಾಯಕ. ಇದು ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಆಗಿದೆ. ಈ ಮೂಲಕ ಬೆವರುವಿಕೆಯ ಮೂಲಕ ಕಳೆದು ಹೋದ ಎಲೆಕ್ಟ್ರೋಲೈಟ್ಸ್ ಅನ್ನು ಪುನಃ ತುಂಬಿಸಲು ನೆರವಾಗುವ ಅದ್ಭುತ ನೈಸರ್ಗಿಕ ಪೇಯ ಇದಾಗಿದೆ. ಪೆÇಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂನಿಂದ ತುಂಬಿರುವ ಇದು ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

Image Courtesy : www.pexels.com

ಮೊಸರು ಅಥವಾ ಮಜ್ಜಿಗೆ
ಬೇಸಿಗೆಯಲ್ಲಿ ಮೊಸರು ಹಾಗೂ ಮಜ್ಜಿಗೆಯನ್ನೂ ನೀವು ಸೇವಿಸಬಹುದು. ಇದಕ್ಕೂ ದೇಹವನ್ನು ತಂಪಾಗಿಸುವ ಗುಣ ಇದೆ. ಇದು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಪೆÇ್ರೀಬಯಾಟಿಕ್‍ಗಳಿಂದ ತುಂಬಿದ್ದು, ಇದು ನಿಮ್ಮ ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Image Courtesy : www.pexels.com

ಪುದೀನ
ಪುದೀನ ಕೂಡಾ ನೈಸರ್ಗಿಕವಾಗಿ ತಂಪಾಗಿಸುವ ಗುಣವನ್ನು ಹೊಂದಿದ್ದು, ಇದು ಕೂಡಾ ಬೇಸಿಗೆಯ ಪರಿಪೂರ್ಣ ಆಯ್ಕೆಗಳಲ್ಲಿ ಒಂದಾಗಿದೆ.

ಹಕ್ಕು ನಿರಾಕರಣೆ : ಈ ವಿಷಯಗಳನ್ನು ಕೇವಲ ಮಾಹಿತಿಯ ಉದ್ದೇಶಕ್ಕೆ ಮಾತ್ರ ನೀಡಲಾಗಿದೆ. ನೀವು ಯಾವುದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಔಷಧಿಗಳನ್ನು ಹೊಂದಿದ್ದರೆ ಯಾವುದೇ ಆಹಾರ ಕ್ರಮದ ಬದಲಾವಣೆಗೆ ಮುನ್ನ ನಿಮ್ಮ ವೈದ್ಯರೊಂದಿಗೆ ಚರ್ಚಿಸಲು ಮರೆಯಬೇಡಿ

Show More

Related Articles

Leave a Reply

Your email address will not be published. Required fields are marked *

Back to top button