Kollywood
ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ನಟ ವಿಜಯ್ ಆಸ್ತಿ ಎಷ್ಟು…?
ತಮಿಳು ಸ್ಟಾರ್, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ಇವರು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯ ವಿವರವನ್ನೂ ಸಲ್ಲಿಸಿದ್ದಾರೆ. ವಿಜಯ್ ಸಲ್ಲಿಸಿದ ಅಫಿಟವಿಡ್ನಲ್ಲಿ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 620 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಎರಡು ಬಿಎಂಡಬ್ಲ್ಯು, ಟೊಯೋಟಾ ಲೆಕ್ಸಸ್, ಟೊಯೋಟಾ ವೆಲ್ಫೈರ್ನಂತಹ ಐಷಾರಾಮಿ ಕಾರುಗಳನ್ನು ವಿಜಯ್ ಹೊಂದಿದ್ದಾರೆ. ಇನ್ನು ವಿಜಯ್ ಸಲ್ಲಿಸಿರುವ ಆಸ್ತಿ ವಿವರಗಳ ಮಾಹಿತಿ ಇಲ್ಲಿದೆ.
ನಟ ವಿಜಯ್ ಆಸ್ತಿ ಎಷ್ಟು…?
- ಚರಾಸ್ತಿ : 404.58 ಕೋಟಿ ರೂಪಾಯಿ, ಸ್ಥಿರಾಸ್ತಿ 220.15 ಕೋಟಿ ರೂಪಾಯಿ
- ಪತ್ನಿ ಸಂಗೀತಾ ಹೆಸರಿನಲ್ಲಿ 15.51 ಕೋಟಿ ಚರಾಸ್ತಿ, 25 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ
- 883 ಗ್ರಾಂ ಚಿನ್ನ, ಐದು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನ
- ಪತ್ನಿಯ ಹೆಸರಿನಲ್ಲಿ 3,132 ಗ್ರಾಂ ಚಿನ್ನ, 134.91 ಕ್ಯಾರೆಟ್ ವಜ್ರ ಇದೆ
- ವಿಜಯ್ ಬಳಿ 2 ಲಕ್ಷ ನಗದು ಇದೆ ಮತ್ತು ವಿವಿಧ ಖಾತೆಗಳಲ್ಲಿ 213 ಕೋಟಿ ರೂ.ಗಳಿಗಿಂತ ಹೆಚ್ಚಿನ ಬ್ಯಾಂಕ್ ಠೇವಣಿ ಇದೆ ಎಂದು ಉಲ್ಲೇಖಿಸಲಾಗಿದೆ
- ವಿಜಯ್ ನೀಡಿರುವ ಸಾಲ : ತಂದೆ ಎಸ್.ಎ. ಚಂದ್ರಶೇಖರ್ ಅವರಿಗೆ 3.02 ಕೋಟಿ ರೂಪಾಯಿ, ತಾಯಿ ಶೋಭಾ ಚಂದ್ರಶೇಖರ್ ಅವರಿಗೆ 87.12 ಲಕ್ಷ ರೂಪಾಯಿ, ಪತ್ನಿಗೆ 12.6 ಕೋಟಿ ರೂಪಾಯಿ, ಮಗ ಜೇಸನ್ ಸಂಜಯ್ಗೆ 8.78 ಲಕ್ಷ ರೂಪಾಯಿ, ಪುತ್ರಿ ದಿವ್ಯಾ ಸಶಾಗೆ 4.6 ಲಕ್ಷ ರೂಪಾಯಿ ಸಾಲ ನೀಡಲಾಗಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.



