Special Desk

ಕೆಟ್ಟ ಕನಸು ತಡೆಯಲು ಮಲಗುವ ಮುನ್ನ ಜಪಿಸಬೇಕಾದ ಮಂತ್ರಗಳು


ಮಂತ್ರ, ಶ್ಲೋಕಗಳು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಪ್ರಮುಖ ಭಾಗಗಳು. ಇವುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು, ಹೆಚ್ಚು ಗಮನ ಹರಿಸಲು, ಒತ್ತಡ ತಗ್ಗಿಸಲು ಸಹಾಯ ಮಾಡುತ್ತವೆ. ಜಪವು ಸಕಾರಾತ್ಮಕ ಶಕ್ತಿಗಳನ್ನು ಸುತ್ತುವರೆದಿರುವಂತೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ. ಅಂತೆಯೇ ಮಲಗುವ ಮುನ್ನ ಮಂತ್ರಗಳನ್ನು ಜಪಿಸುವುದು ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೆ ಕೆಲ ಮಂತ್ರಗಳು ಕೆಟ್ಟ ಕನಸು ಬೀಳದಂತೆ ತಡೆಯುತ್ತವೆ ಎಂದೂ ಹೇಳಲಾಗುತ್ತದೆ.

ಓಂ
`ಓಂ’ ಎಂಬುದು ಬ್ರಹ್ಮಾಂಡದಿಂದ ಹೊರಬಂದ ಮೊದಲ ಶಬ್ದ ಎಂದು ಹೇಳಲಾಗುತ್ತದೆ. ನಿದ್ರೆಗೆ ಮುನ್ನ ಓಂ ಮಂತ್ರ ಜಪಿಸುವುದು ಉತ್ತಮ ಎಂಬ ನಂಬಿಕೆ ಇದೆ. ಓಂ ಹೊರಸೂಸುವ ಪವಿತ್ರ ಶಕ್ತಿ ಮತ್ತು ಕಂಪನಗಳು ಮನಸ್ಸು ಹಾಗೂ ಆತ್ಮವನ್ನು ಶುದ್ಧೀಕರಿಸುವ ಜೊತೆಗೆ ದಿನವಿಡೀ ಸಂಗ್ರಹವಾಗುತ್ತಿದ್ದ ಯಾವುದೇ ಮಾನಸಿಕ ಗೊಂದಲವನ್ನು ಸಹ ತೆಗೆದುಹಾಕುತ್ತದೆ ಎಂಬುದು ನಂಬಿಕೆ.

ಹನುಮಾನ್ ಚಾಲೀಸಾ
ಹನುಮಂತ ದೇವರಿಗೆ ಸಮರ್ಪಿತವಾದ ಸ್ತೋತ್ರವಿದು. ಹನುಮಾನ್ ಚಾಲೀಸಾದ ಪಠಣ ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿ ಇದೆ.

ಮಹಾಮೃತ್ಯುಂಜಯ ಮಂತ್ರ
ಭಯವನ್ನು ನಿವಾರಿಸಲು, ಜಯಿಸಲು ಮಹಾಮೃತ್ಯುಂಜಯ ಮಂತ್ರವು ಪ್ರಬಲವಾದ ಪ್ರಾರ್ಥನೆಯಾಗಿದೆ. ಓಂ ಶಬ್ದದಿಂದ ಪ್ರಾರಂಭವಾಗುವ ಮಹಾಮೃತ್ಯುಂಜಯ ಮಂತ್ರದ ನಿರಂತರ ಮತ್ತು ಪುನರಾವರ್ತಿತ ಪಠಣವು ಪರಶಿವನ ಆಶೀರ್ವಾದ ಪಡೆಯಲು ನೆರವಾಗುತ್ತದೆ. ಮಲಗುವ ಮುನ್ನವೂ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬಹುದು

ದುರ್ಗಾ ಮಂತ್ರ
ಯಾ ದೇವಿ ಸರ್ವ ಭೂತೇಷು ನಿದ್ರಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ದೇವಿ ದುರ್ಗೆಗೆ ಸಮರ್ಪಿತ ಮಂತ್ರ ಇದು. ತಾಯಿ ತನ್ನ ಮಗುವನ್ನು ರಕ್ಷಿಸುವಂತೆ ದುರ್ಗಾ ಮಾತೆ ತನ್ನ ಭಕ್ತರನ್ನು ಕಾಪಾಡುತ್ತಾಳೆ ಎನ್ನುವುದು ನಂಬಿಕೆ.

Show More

Related Articles

Leave a Reply

Your email address will not be published. Required fields are marked *

Back to top button