ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತ್ರಿಷಾ ಕೃಷ್ಣನ್ ಧರಿಸಿದ ಸೀರೆಯನ್ನು ನೋಡಿ ಐಶ್ವರ್ಯ ರೈ ಸೀರೆ ನೆನಪಿಸಿಕೊಂಡ ನೆಟ್ಟಿಗರು
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಗಮನ ಸೆಳೆದವರಲ್ಲಿ ನಟಿ ತ್ರಿಷಾ ಕೂಡಾ ಒಬ್ಬರು. ಸಾಂಪ್ರದಾಯಿಕ ಸೀರೆಯುಟ್ಟು ತ್ರಿಷಾ ಕಾರ್ಯಕ್ರಮಕ್ಕೆ ಬಂದಿದ್ದರು.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತ್ರಿಷಾ, ವಿಜಯ್ ಪ್ರಮಾಣವಚನವನ್ನು ಕಣ್ತುಂಬಿಕೊಂಡಿದ್ದರು. ಜೊತೆಗೆ ವಿಜಯ್ ತಾಯಿ ಶೋಭಾರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಈ ಎಲ್ಲಾ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು.
View this post on Instagram
ಜೊತೆಗೆ ತ್ರಿಷಾ ಧರಿಸಿದ್ದ ನೀಲಿ ಸೀರೆ ಕೂಡಾ ಗಮನ ಸೆಳೆದಿತ್ತು. ಅಲ್ಲದೆ ಹಲವಾರು ನೆಟ್ಟಿಗರು ತ್ರಿಷಾ ಅವರ ನೋಟವನ್ನು 2000ರ ದಶಕದ ಆರಂಭದ ಐಕಾನಿಕ್ ಸೀರೆ ಲುಕ್ಗಳಲ್ಲಿ ಒಂದಕ್ಕೆ ಹೋಲಿಸಲು ಪ್ರಾರಂಭಿಸಿದರು. ಅಂದರೆ ಅಂದು ಬಾಲಿವುಡ್ ನಟಿ ಐಶ್ವರ್ಯ ರೈ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗುವಾಗ ಧರಿಸಿದ್ದ ಸೀರೆಯನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ ಕೂಡಾ ಈ ಸೀರೆಯನ್ನು ಸಾಂಪ್ರದಾಯಿಕ ಚಿನ್ನದ ಆಭರಣಗಳೊಂದಿಗೆ ಧರಿಸಿದ್ದರು.
View this post on Instagram



