Kollywood

ರಜನಿಕಾಂತ್ ಅಭಿನಯದ `ಜೈಲರ್ 2′ ಚಿತ್ರೀಕರಣದ ವೇಳೆ ಅವಘಡ : ಕಾರ್ಮಿಕನ ದುರ್ಮರಣ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ `ಜೈಲರ್ 2′ ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಚಿತ್ರೀಕರಣದ ಸೆಟ್‍ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 28 ವರ್ಷದ ಕಾರ್ತಿಕೇಯನ್ ಎಂಬ ಕಾರ್ಮಿಕರು ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನ ಪಣೈಯೂರ್‍ನಲ್ಲಿರುವ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕೇಯನ್ ಮನೆಯ ಸೆಟ್ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಿನ ಶೂಟಿಂಗ್ ಅನ್ನು ರದ್ದು ಮಾಡಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button