Special Desk

ವಿಷ್ಣು ಸಹಸ್ರನಾಮವನ್ನು ಮೊದಲು ಪಠಿಸಿದ್ದು ಯಾರು?

ವಿಷ್ಣು ಸಹಸ್ರನಾಮವು ಭಗವಾನ್ ವಿಷ್ಣುವಿನ ಸಾವಿರ ಹೆಸರುಗಳನ್ನು ಪಟ್ಟಿ ಮಾಡುವ ಪವಿತ್ರ ಸ್ತೋತ್ರವಾಗಿದೆ. ಇದನ್ನು ಮೊದಲು ಪಠಿಸಿದವರು ಭೀಷ್ಮ ಪಿತಾಮಹ ಎಂಬ ಉಲ್ಲೇಖಗಳು ಸಿಗುತ್ತವೆ.

ಇಚ್ಛಾಮರಣಿ ಭೀಷ್ಮಾಚಾರ್ಯರು ಕುರುಕ್ಷೇತ್ರ ಯುದ್ಧದ ವೇಳೆ ಶರಶಯನದಲ್ಲಿ ಮಲಗಿದ್ದ ಸಂದರ್ಭವದು. ಮಹಾಭಾರತ ಯುದ್ಧದ ನಂತರ ಪಾಂಡವರಲ್ಲಿ ಹಿರಿಯ ಯುಧಿಷ್ಠಿರ ತನ್ನವರೊಂದಿಗಿನ ಯುದ್ಧದಿಂದ ನೊಂದಿದ್ದ. ಹೀಗಾಗಿ ಯುಧಿಷ್ಠಿರನು ಧರ್ಮ ಮತ್ತು ಮೋಕ್ಷದ ಬಗ್ಗೆ ಮಾರ್ಗದರ್ಶನ ನೀಡುವಂತೆ ಶ್ರೀಕೃಷ್ಣರಲ್ಲಿ ಕೇಳಿದ್ದ. ಆಗ ಭಗವಾನ್ ಶ್ರೀಕೃಷ್ಣರು `ಇದಕ್ಕೆ ನನಗಿಂತ ಭೀಷ್ಮಾಚಾರ್ಯರು ಸೂಕ್ತವಾದವರು’ ಎಂದು ಹೇಳುತ್ತಾರೆ.

ಬಳಿಕ ಶ್ರೀಕೃಷ್ಣ ಹಾಗೂ ಪಂಚಪಾಂಡವರು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿದ್ದಲ್ಲಿಗೆ ಬಂದಿದ್ದರು. ಹೀಗೆ ತನ್ನ ಬಳಿ ಬಂದಿದ್ದ ಯುಧಿಷ್ಠಿನಿಗೆ ಭೀಷ್ಮಾಚಾರ್ಯರು ಉಪದೇಶವನ್ನು ನೀಡಿದರು. ಈ ವೇಳೆ ಆಂತರಿಕ ಶಾಂತಿ, ಪುನರ್ಜನ್ಮದ ಚಕ್ರದಿಂದ ಮುಕ್ತಿಗೆ ಅಂತಿಮ ಮಾರ್ಗವಾಗಿ ಭೀಷ್ಮ ಪಿತಾಮಹರು ಈ ಪವಿತ್ರ ಸ್ತೋತ್ರವನ್ನು ಹೇಳಿದ್ದರು. ಭಗವಾನ್ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಎದುರದಲ್ಲೇ ಭೀಷ್ಮರು ಸಹಸ್ರನಾಮವನ್ನು ಪಠಿಸಿದ್ದರು.

ಈ ಸಾವಿರ ನಾಮಗಳನ್ನು ಜಪಿಸುವುದರಿಂದ ಅಥವಾ ಧ್ಯಾನಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ, ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಭೀಷ್ಮ ಪಿತಾಮಹರು ಯುಧಿಷ್ಠಿರನಿಗೆ ವಿವರಿಸಿದ್ದರು. ಯುಧಿಷ್ಠಿರ ಹಾಗೂ ಭೀಷ್ಮಾಚಾರ್ಯರ ನಡುವಿನ ಈ ಸಂಭಾಷಣೆಯೇ ವಿಷ್ಣುಸಹಸ್ರನಾಮವಾಗಿದೆ. ನಂತರ ಇದನ್ನು ಮಹರ್ಷಿ ವೇದವ್ಯಾಸರು ಮಹಾಭಾರತ ಮಹಾಕಾವ್ಯದ ಅಧ್ಯಾಯವೊಂದರಲ್ಲಿ ದಾಖಲಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button