Kollywood

ದುಬೈನಲ್ಲಿ ಐಷಾರಾಮಿ ವಿಹಾರ ನೌಕೆ ಖರೀದಿಸಿದ ನಟ ಆರ್ ಮಾಧವನ್

ಖ್ಯಾತ ನಟ ಆರ್ ಮಾಧವನ್ ದುಬೈನಲ್ಲಿ ನೆಲೆಸಿದ್ದಾರೆ. ತನ್ನ ಪುತ್ರ ವೇದಾಂತ್ ಮಾಧವನ್ ಈಜು ವೃತ್ತಿಜೀವನಕ್ಕಾಗಿ ಇವರು ದುಬೈಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಈಜುಗಾರರಾಗಿ ವೇದಾಂತ್ ಮಾಧವನ್ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ವೇದಾಂತ್ ಈಗಾಗಲೇ ಹಲವಾರು ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ತಮ್ಮ ದುಬಾರಿ ಖರೀದಿಯ ಬಗ್ಗೆ ಮಾಧವನ್ ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ವಿಹಾರ ನೌಕೆಯ ಖರೀದಿ ಮಾಧವನ್ ಅವರ ಬಹುಕಾಲದ ಕನಸಾದ ಕ್ಯಾಪ್ಟನ್ ಪರವಾನಗಿಯನ್ನು ಗಳಿಸುವ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಕಾರಣವಾಗಿದ್ದರಿಂದ ಈ ನೌಕೆ ಮಾಧವನ್ ಅವರಿಗೆ ಇನ್ನಷ್ಟು ಹೃದಯಕ್ಕೆ ಹತ್ತಿರವಾಗಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯವನ್ನು ಅವರು ಈ ಕ್ಯಾಪ್ಟನ್ ಸರ್ಟಿಫಿಕೇಟ್ ಪಡೆಯಲು ಸಿದ್ಧತೆ ನಡೆಸಿದ್ದರು. ಇದಕ್ಕೆ ಆರು ತಿಂಗಳ ಕಾಲ ಹಿಡಿದಿತ್ತು. ಕ್ಯಾಪ್ಟನ್ ಲೈಸೆನ್ಸ್ ಬಂದ ಬಳಿಕ ಅವರು ಈ ವಿಹಾರ ನೌಕೆಯನ್ನು ಖರೀದಿಸಿದ್ದರು. ಜೊತೆಗೆ ನನ್ನ ಹಣದ ಪ್ರದರ್ಶನಕ್ಕಾಗಿ ನಾನು ಇದನ್ನು ಖರೀದಿಸಿಲ್ಲ. ನಾನು ನನ್ನ ಆದಾಯದ ಮಿತಿಯಲ್ಲಿ ಬದುಕುವುದರಲ್ಲಿ ಹಾಗೂ ಎಲ್ಲಾ ತೆರಿಗೆಗಳನ್ನು ಪಾವತಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ಈ ವಿಹಾರ ನೌಕೆ ವೈಯಕ್ತಿಕ ಮೈಲಿಗಲ್ಲು ಮತ್ತು ಇದು ತನ್ನನ್ನು ಹಾಗೂ ತನ್ನ ಕುಟುಂಬದ ಸಂತೋಷವನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಇದನ್ನು ಖರೀದಿಸಿದ್ದೇನೆ ಎಂದೂ ಮಾಧವನ್ ಹೇಳಿಕೊಂಡಿದ್ದಾರೆ.


ದುಬೈನಲ್ಲಿ ಆಸ್ತಿ ಮತ್ತು ವಿಹಾರ ನೌಕೆಯ ಜೊತೆಗೆ, ಮಾಧವನ್ ಐಷಾರಾಮಿ ವಾಹನಗಳ ಪ್ರಭಾವಶಾಲಿ ಸಂಗ್ರಹವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ. ಇವರ ಗ್ಯಾರೇಜ್‍ನಲ್ಲಿ ಸುಮಾರು 80 ಲಕ್ಷ ರೂ. ಮೌಲ್ಯದ ಮರ್ಸಿಡಿಸ್-ಬೆನ್ಜ್ ಮತ್ತು ಸುಮಾರು 1 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ಸೇರಿವೆ ಎಂದು ಹೇಳಲಾಗುತ್ತದೆ. ಜೊತೆಗೆ ಸುಮಾರು ಲಕ್ಷಾಂತರ ಬೆಲೆಯ ಬೈಕ್ ಸಂಗ್ರಹವನ್ನೂ ಇವರು ಹೊಂದಿದ್ದಾರೆ ಎನ್ನಲಾಗುತ್ತದೆ.

ಸಿನಿಮಾದ ಬಗ್ಗೆ ನೋಡುವುದಾದರೆ ಆರ್. ಮಾಧವನ್ ಜಿ.ಡಿ.ಎನ್. ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಪ್ರಸಿದ್ಧ ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಜಿ.ಡಿ. ನಾಯ್ಡು ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರವಾಗಿದೆ. ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಆಗಸ್ಟ್ 7 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button