Tollywood

ಎಂಜಿಆರ್ ಅವರ ಮೇಲೆ ಅಪಾರ ಗೌರವವಿದೆ : ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ರಾಜೇಂದ್ರ ಪ್ರಸಾದ್

ತಮಿಳು ಸಿನಿಮಾ ರಂಗದ ದಂತಕತೆ ಎಂಜಿ ರಾಮಚಂದ್ರನ್ ಅವರ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಕಾರಣದಿಂದ ಸುದ್ದಿಯಾಗಿದ್ದ ಟಾಲಿವುಡ್ ನಟ ರಾಜೇಂದ್ರ ಪ್ರಸಾದ್ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ತಮಿಳಿನಲ್ಲಿಯೇ ವಿಡಿಯೋ ಮಾಡಿರುವ ರಾಜೇಂದ್ರ ಪ್ರಸಾದ್ ಎಂಜಿಆರ್ ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

“ಕಾಂತರಾವ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಸಮಾರಂಭದಲ್ಲಿ, ನಾನು ವೇದಿಕೆಯಲ್ಲಿ ಸಾಂದರ್ಭಿಕವಾಗಿ ತಮಾಷೆಯಾಗಿ ಮಾತನಾಡುತ್ತಿದ್ದಾಗ, ತಮಿಳು ಚಿತ್ರರಂಗದ ದಂತಕಥೆ, ದೇವರು ಎಂಜಿಆರ್ ಸರ್ ಬಗ್ಗೆ ಬಾಯಿತಪ್ಪಿ ಒಂದು ಮಾತು ಬಂದು ಹೋಯಿತು. ಇದು ವಿವಾದದ ಸ್ವರೂಪ ಪಡೆದುಕೊಂಡಿದೆ. ನಾನು ಎಂಜಿಆರ್‌ ಬಗ್ಗೆ ಮನಸ್ಸಿನಿಂದ ಹಾಗೆ ಹೇಳಲು ಸಾಧ್ಯವೇ? ಮದ್ರಾಸ್‌ನಲ್ಲಿ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದಾಗ ಎಂಜಿಆರ್ ಸರ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ನಮ್ಮ ಕಲಿಕೆ ನೋಡಲು ಇವರು ಇಲ್ಲಿಗೆ ಬಂದಿದ್ದರು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಹೀಗೆ ಬಾಯಿತಪ್ಪಿ ಬಂದ ನನ್ನ ಮಾತುಗಳಿಂದ ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ಎಂದು ಅವರು ಹೇಳಿಕೊಂಡಿದ್ದಾರೆ.

ತೆಲುಗಿನ ಹಿರಿಯ ನಟ, ನಿರ್ಮಾಪಕ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕಂಡು ಎಂಜಿಆರ್ ಹೆದರುತ್ತಿದ್ದರು. ಅವರ ಪ್ಯಾಂಟ್ ಒದ್ದೆಯಾಗುತ್ತಿತ್ತು ಎಂದು ಇವರು ಹೇಳಿದ್ದರು. ಈ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಜೊತೆಗೆ ರಾಜೇಂದ್ರ ಪ್ರಸಾದ್ ಕ್ಷಮೆಯಾಚನೆಗೆ ಎಲ್ಲರೂ ಆಗ್ರಹಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button