RCB Sold For Rs 16,660 Crore : ಭಾರೀ ಮೊತ್ತಕ್ಕೆ ಆರ್ಸಿಬಿ ಮಾರಾಟ : ಹೊಸ ಮಾಲಿಕರ ತೆಕ್ಕೆಗೆ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಗೆ ಈಗ ಹೊಸ ಮಾಲಿಕರು ಬಂದಿದ್ದಾರೆ. ಭಾರೀ ಮೊತ್ತಕ್ಕೆ ಈ ಮಾರಾಟ ಪ್ರಕ್ರಿಯೆ ನಡೆದಿದೆ. 1.78 ಬಿಲಿಯನ್ ಡಾಲರ್ ಅಂದರೆ ಸುಮಾರು 16,706 ಕೋಟಿ ರೂಪಾಯಿ ವಹಿವಾಟಿನೊಂದಿಗೆ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್ಸ್ಟೋನ್ನ ಇಕ್ವಿಟಿ ಫರ್ಮ್ ಒಕ್ಕೂಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಖರೀದಿ ಮಾಡಿದೆ.
ಈ ಒಕ್ಕೂಟವು ಯುಕೆ-ಡಿಯಾಜಿಯೊ ಪಿಎಲ್ಸಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್)ನಿಂದ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಒಡೆತನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಹೀಗಾಗಿ ಆದಿತ್ಯ ಬಿರ್ಲಾ ಗ್ರೂಪ್ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿದ್ದು, ಬೋಲ್ಟ್ ವೆಂಚರ್ಸ್ನ ಸಂಸ್ಥಾಪಕ ಡೇವಿಡ್ ಬ್ಲಿಟ್ಜರ್ ಮತ್ತು ಬಿಎಕ್ಸ್ಪಿಇ ಸಿಇಒ ವಿರಾಲ್ ಪಟೇಲ್ ಈ ಮಾಲಿಕತ್ವದ ಒಕ್ಕೂಟದಲ್ಲಿ ಇರಲಿದ್ದಾರೆ.
ಇದಕ್ಕೆ ಮೊದಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾರಾಟವೂ ನಡೆದಿತ್ತು. ಈ ತಂಡವನ್ನು ಅಮೆರಿಕ ಮೂಲದ ಕಾಲ್ ಸೋಮಾನಿ ನೇತೃತ್ವದ ಒಕ್ಕೂಟವು ಸುಮಾರು 15,290 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.



