Special Desk

ಒತ್ತಡ ಮತ್ತು ಹೃದಯದ ಆರೋಗ್ಯಕ್ಕೆ ಇದೆ ಸಂಬಂಧ! : ಉತ್ತಮ ಆರೋಗ್ಯಕ್ಕೆ ಒತ್ತಡ ನಿರ್ವಹಣೆಯೂ ಮುಖ್ಯ!

ಹೃದಯದ ಕಾಳಜಿ ವಹಿಸುವುದು ಬಲು ಮುಖ್ಯ. ಈ ನಿಟ್ಟಿನಲ್ಲಿ ಒತ್ತಡ ನಿರ್ವಹಣೆಯೂ ಅಗತ್ಯ. ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡವೂ ಅಷ್ಟೇ ಕೆಟ್ಟ ಪರಿಣಾಮ ಬೀರುತ್ತಿದೆ. ಅತಿಯಾದ ಸ್ಟ್ರೆಸ್ ಹೃದಯಕ್ಕೂ ತೊಂದರೆ ತರಬಹುದು.

ಒತ್ತಡದಿಂದ ಉಂಟಾಗುವ ಪರಿಣಾಮಗಳಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೈಬಿಪಿ ಕೂಡಾ ಒಂದು. ಇದರಿಂದ ನಿಮ್ಮ ಹೃದಯ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಅಂತಿಮವಾಗಿ ಇದು ರಕ್ತನಾಳಗಳಿಗೆ ಹಾನಿ ಮಾಡಿ, ಹೃದಯದ ತೊಂದರೆಯ ಅಪಾಯ ಹೆಚ್ಚಿಸಬಹುದು

ಇದಲ್ಲದೆ, ಒತ್ತಡವು ವೇಗದ ಅಥವಾ ಅಸಮ ಹೃದಯ ಬಡಿತಕ್ಕೂ ಕಾರಣವಾಗಬಹುದು. ಸ್ಟ್ರೆಸ್‌ನಿಂದ ರೋಗ ನಿರೋಧಕ ಶಕ್ತಿಯ ಕುಂಠಿತವಾಗುತ್ತದೆ. ಇವಷ್ಟೇ ಅಲ್ಲದೆ, ಒತ್ತಡ ಹೆಚ್ಚು ತಿನ್ನುವಂತೆ ಮಾಡಬಹುದು, ಅನಾರೋಗ್ಯಕರ ಆಹಾರದ ಆಯ್ಕೆಯನ್ನು ಹೆಚ್ಚಿಸಬಹುದು. ಈ ರೀತಿಯ ಕಳಪೆ ಆಹಾರ ಪದ್ಧತಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಖಂಡಿತಾ ಇದು ಹೃದಯಕ್ಕೆ ಉತ್ತಮವಲ್ಲ.

ಜೊತೆಗೆ ಕಳಪೆ ನಿದ್ರೆಯ ಗುಣಮಟ್ಟ, ಭಾವನಾತ್ಮಕ ಆಯಾಸಕ್ಕೂ ಒತ್ತಡ ದಾರಿಯಾಗುತ್ತದೆ. ಇದೂ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒತ್ತಡ ನಿರ್ವಹಣೆ ಹೇಗೆ ಮಾಡಬಹುದು?
ಒತ್ತಡ ನಿರ್ವಹಣೆಯ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯದ ಕಾಳಜಿ ವಹಿಸಬಹುದು. ಅದಕ್ಕೆ ನೀವು ತುಂಬಾ ಕಷ್ಟಪಡಬೇಕಾಗಿಲ್ಲ.

1 ಪ್ರತಿದಿನ ಆಳವಾದ ಉಸಿರಾಟದ ವ್ಯಾಯಾಮ ಅಭ್ಯಾಸಿಸಿ. ಯೋಗ, ಧಾನ್ಯವೂ ಒತ್ತಡ ನಿರ್ವಹಣೆಗೆ ಉತ್ತಮ
2 ವೃತ್ತಿ ಮತ್ತು ಬದುಕಿನ ಸಮತೋಲನ ಕಾಯ್ದುಕೊಳ್ಳಿ
3 ವ್ಯಾಯಾಮ ನಿಮ್ಮ ದಿನಚರಿಯ ಭಾಗವಾಗಲಿ. 30 ನಿಮಿಷಗಳ ವಾಕಿಂಗ್, ಡ್ಯಾನ್ಸ್‌ನಂತಹ ಚಟುವಟಿಕೆಗಳೂ ಉತ್ತಮ
4 ಸ್ನೇಹಿತರು, ಪ್ರೀತಿಪಾತ್ರರು, ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ
5 ಸರಿಯಾದ ನಿದ್ದೆಯ ದಿನಚರಿಯನ್ನು ಪಾಲಿಸಿ. ಒಂದೇ ಸಮಯಕ್ಕೆ ಮಲಗುವ, ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿ
6 ಸ್ಕ್ರೀನ್ ಟೈಮ್‌ಗೆ ಮಿತಿ ಹಾಕಿ. ಸೋಶಿಯಲ್ ಮೀಡಿಯಾಗಳ ಮಿತವಾದ ಬಳಕೆಗೆ ಆದ್ಯತೆ ನೀಡಿರಿ
7 ಅಗತ್ಯಬಿದ್ದರೆ ಒತ್ತಡ ನಿರ್ವಹಣೆಗೆ ತಜ್ಞರ ಸಲಹೆ ಪಡೆಯಿರಿ

ಆರೋಗ್ಯಕರ ಜೀವನಶೈಲಿಯಿಂದ ನಮ್ಮ ಜೀವನದ ಗುಣಮಟ್ಟ ಹೆಚ್ಚಿಸಬಹುದು. ಅದೇನು ತುಂಬಾ ಕಠಿಣವೇನಲ್ಲ… ಅಚಲ ನಿರ್ಧಾರವಷ್ಟೇ ಮುಖ್ಯ…

Show More

Related Articles

Leave a Reply

Your email address will not be published. Required fields are marked *

Back to top button