Automobile
ಏಪ್ರಿಲ್‍ನಿಂದ ಏರುತ್ತಿದೆ ಮರ್ಸಿಡಿಸ್-ಬೆನ್ಜ್ ಕಾರಿನ ಬೆಲೆ? : ಎಷ್ಟು ಹೆಚ್ಚಳ?
ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್-ಬೆನ್ಜ್ ಇಂಡಿಯಾ ತನ್ನ ಎಲ್ಲಾ ಮಾದರಿ ಶ್ರೇಣಿಯ ಕಾರುಗಳ ಬೆಲೆಯನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ ಈ ಕಾರುಗಳ ಬೆಲೆ ಏರಿಕೆಯಾಗಲಿದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸೆಡಾನ್‍ಗಳು, ಎಸ್‍ಯುವಿಗಳು ಹಾಗೂ ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊದಲ್ಲಿ ಬೆಲೆಯು ಸುಮಾರು ಶೇಕಡಾ 2ರಷ್ಟು ಹೆಚ್ಚಾಗಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಪ್ರಕಾರ, ಹೆಚ್ಚುತ್ತಿರುವ ಇನ್‍ಪುಟ್ ವೆಚ್ಚಗಳು ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತಗಳಿಂದ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ.
2026ರಲ್ಲಿ ಕಂಪನಿ ಮಾಡುತ್ತಿರುವ ಎರಡನೇ ದರ ಪರಿಷ್ಕರಣೆ ಇದಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಸುಮಾರು ಶೇಕಡಾ 2ರಷ್ಟು ಬೆಲೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಕಂಪನಿ ಎರಡನೇ ಬಾರಿಗೆ ಬೆಲೆ ಏರಿಕೆ ಮಾಡಿದೆ. ಆದಾಗ್ಯೂ, ಮಾದರಿ-ವಾರು ಬೆಲೆ ಬದಲಾವಣೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.



