Bharat NCAP : ಕಿಯಾ ಸೆಲ್ಟೋಸ್ ಕ್ರ್ಯಾಶ್ ಟೆಸ್ಟ್ : ಈ ಕಾಂಪ್ಯಾಕ್ಟ್ ಎಸ್ಯುವಿಯ ಸ್ಟಾರ್ಗಳೆಷ್ಟು…?
ಕಿಯಾ ಸೆಲ್ಟೋಸ್ ಮಧ್ಯಮ ಗಾತ್ರದ ಎಸ್ಯುವಿ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ಗೆ ಒಳಪಟ್ಟಿದೆ. ಈ ಪರೀಕ್ಷೆಯ ಫಲಿತಾಂಶ ಈಗ ಹೊರಬಿದ್ದಿದ್ದು, ಈ ಕಾಂಪಾಕ್ಟ್ ಎಸ್ಯುವಿ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಆಯ್ದ ರೂಪಾಂತರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಏಜೆನ್ಸಿ ನಿರ್ದಿಷ್ಟಪಡಿಸಿದಂತೆ ಎಲ್ಲಾ ಟ್ರಿಮ್ಗಳಿಗೆ ರೇಟಿಂಗ್ ಅನ್ವಯಿಸುತ್ತದೆ.
Safety Ratings of KIA – SELTOS
The KIA – SELTOS has scored 5-Stars in Adult Occupant Protection (AOP) and 5-Stars in Child Occupant Protection (COP) in the recent Bharat NCAP crash tests.#bharatncap #safetyfirst #safetybeyondregulations #morestarssafercars #drivesafe #bncap pic.twitter.com/qGBML2mnIf
— Bharat NCAP (@bncapofficial) March 30, 2026
ಸೆಲ್ಟೋಸ್ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 32 ಪಾಯಿಂಟ್ಗಳಲ್ಲಿ 31.70 ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ 49 ಪಾಯಿಂಟ್ಗಳಲ್ಲ್ಲಿ 45.00 ಪಾಯಿಂಟ್ ಗಳಿಸಿದೆ.
ಸುರಕ್ಷತಾ ಸಲಕರಣೆಗಳಲ್ಲಿ ಸೆಲ್ಟೋಸ್ ಆರು ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಸೀಟ್ ಬೆಲ್ಟ್ ರಿಮೈಂಡರ್ಗಳು ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ.



