Automobile

ಏಪ್ರಿಲ್ 1ರಿಂದ FASTag ವಾರ್ಷಿಕ ಪಾಸ್ ದರ ಹೆಚ್ಚಳ : ಎಷ್ಟು ಏರಿಕೆಯಾಗಲಿದೆ?

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ -NHAI ಈಗಾಗಲೇ ತನ್ನ FASTag ವಾರ್ಷಿಕ ಪಾಸ್ ದರವನ್ನು ಹೆಚ್ಚು ಮಾಡುವುದಾಗಿ ಘೋಷಿಸಿತ್ತು. ಅದರಂತೆ 2026ರ ಏಪ್ರಿಲ್ 1ರಿಂದ FASTag ವಾರ್ಷಿಕ ಪಾಸ್ ಬೆಲೆಯಲ್ಲಿ 75 ರೂಪಾಯಿ ಹೆಚ್ಚಾಗಲಿದೆ. ಈ ಮೂಲಕ 3,000 ರೂಪಾಯಿ ಇದ್ದ ಈ ವಾರ್ಷಿಕ ಪಾಸ್ ದರ ಈಗ 3,075 ರೂಪಾಯಿ ಆಗಲಿದೆ.

ಹೆದ್ದಾರಿ ಪ್ರಯಾಣವನ್ನು ಸರಳಗೊಳಿಸಲು ಕಳೆದ ವರ್ಷದ ಆಗಸ್ಟ್‌ನಲ್ಲಿ ಖಾಸಗಿ ವಾಹನ ಸವಾರರಿಗಾಗಿ ಈ ಪ್ರಿಪೇಯ್ಡ್ ಟೋಲ್ ಯೋಜನೆಯನ್ನು ಪರಿಚಯಿಸಲಾಗಿತ್ತು. ಆಗಾಗ ರೀಚಾರ್ಜ್ ಮಾಡುವುದನ್ನು ತಪ್ಪಿಸುವ ಸಲುವಾಗಿ FASTag ವಾರ್ಷಿಕ ಪಾಸ್ ಅನ್ನು ಜಾರಿ ಮಾಡಲಾಗಿತ್ತು. ಕಾರು, ಜೀಪ್‌ಗಳು ಮತ್ತು ವ್ಯಾನ್‌ ಸೇರಿ ಖಾಸಗಿ ಮತ್ತು ವಾಣಿಜ್ಯೇತರ ವಾಹನಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಈ ಪಾಸ್ ಮೂಲಕ ಖಾಸಗಿ ವಾಹನ ಹೊಂದಿರುವರು ಪ್ರತಿಬಾರಿ ಟೋಲ್ ಪಾವತಿಸುವ ಬದಲು ಒಂದು ವರ್ಷದ ಪಾಸ್ ಖರೀದಿಸಬಹುದಿತ್ತು. ಈ ವಾರ್ಷಿಕ ಪಾಸ್ ಮೂಲಕ ಗರಿಷ್ಠ 200 ಟೋಲ್ ಟ್ರಿಪ್‌ಗಳು ಅಂದರೆ 200 ಬಾರಿ ಟೋಲ್ ಪ್ಲಾಜಾ ದಾಟುವುದು ಅಥವಾ ಒಂದು ವರ್ಷದ ಬಳಕೆ ಮಾಡಬಹುದಿತ್ತು. ಒಂದು ವರ್ಷದೊಳಗೆ 200 ಟೋಲ್ ಟ್ರಿಪ್‌ ಪೂರ್ಣಗೊಂಡರೆ ಈ ಪಾಸ್‌ನ ಅವಧಿ ಕೊನೆಯಾಗುತ್ತಿತ್ತು.

ಈ ಯೋಜನೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ಸುಮಾರು 56 ಲಕ್ಷಕ್ಕೂ ಹೆಚ್ಚು ಬಳಕೆದಾರರು ವಾರ್ಷಿಕ ಪಾಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಬಳಸಬಹುದು.

  • FASTag ವಾರ್ಷಿಕ ಪಾಸ್ ಖರೀದಿಸಲು, ಬಳಕೆದಾರರು ಅಧಿಕೃತ MoRTH ಅಥವಾ NHAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ರಾಜ್‌ಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬಹುದು.
  • ವಾಹನ ವಿವರಗಳು ಮತ್ತು FASTag ID ಅನ್ನು ನಮೂದಿಸಿದ ನಂತರ, ಬಳಕೆದಾರರು UPI, ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ಆಯ್ಕೆಗಳ ಮೂಲಕ ಪಾವತಿಯನ್ನು ಪೂರ್ಣಗೊಳಿಸಬಹುದು.
  • ವಹಿವಾಟು ಯಶಸ್ವಿಯಾದ ನಂತರ, ಪಾಸ್ ಅನ್ನು ಅಸ್ತಿತ್ವದಲ್ಲಿರುವ FASTag ಗೆ ಲಿಂಕ್ ಮಾಡಲಾಗುತ್ತದೆ.
  • ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ದೃಢೀಕರಣವನ್ನು ಕಳುಹಿಸಲಾಗುತ್ತದೆ.

Show More

Related Articles

Leave a Reply

Your email address will not be published. Required fields are marked *

Back to top button