Mollywood

‘ಪೇಟ್ರಿಯಾಟ್’ ಆಕ್ಷನ್ ಚಿತ್ರದಲ್ಲಿ ಜೊತೆಯಾದ ಮಮ್ಮುಟ್ಟಿ-ಮೋಹನ್‌ ಲಾಲ್ : ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

ಮಾಲಿವುಡ್ ಸೂಪರ್ ಸ್ಟಾರ್‌ಗಳಾದ ಮಮ್ಮುಟ್ಟಿ ಹಾಗೂ ಮೋಹನ್‌ ಲಾಲ್ ದೀರ್ಘ ಅಂತರದ ನಂತರ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಪೇಟ್ರಿಯಾಟ್’ ಎಂಬ ಆಕ್ಷನ್ ಚಿತ್ರದಲ್ಲಿ ಇವರಿಬ್ಬರು ಅಭಿನಯಿಸಿದ್ದು, 2026ರ ಮೇ 1ರಂದು ಈ ಸಿನಿಮಾ ತೆರೆಗೆ ಬರಲಿದೆ. ಈ ಮೊದಲು ಈ ಸಿನಿಮಾವನ್ನು ಏಪ್ರಿಲ್ 23ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಈ ದಿನವನ್ನು ಬದಲಾಯಿಸಿ ಮೇ 1 ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಚಿತ್ರದ ಹೊಸ ರಿಲೀಸ್ ಡೇಟ್ ಬಗ್ಗೆ ಸ್ವತಃ ಮಮ್ಮುಟ್ಟಿ ಹಾಗೂ ಮೋಹನ್‌ ಲಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪೇಟ್ರಿಯಾಟ್’ ಗುಪ್ತಚರ ಕಾರ್ಯಾಚರಣೆಯನ್ನು ಆಧರಿಸಿದ ಸ್ಪೈ ಆಕ್ಷನ್ ಚಿತ್ರವಾಗಿದ್ದು, ಸುಮಾರು ಹತ್ತು ವರ್ಷಗಳ ಬಳಿಕ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರನ್ನು ಈ ಚಿತ್ರ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.

 

Show More

Leave a Reply

Your email address will not be published. Required fields are marked *

Back to top button