Mollywood

ಮಲಯಾಳಂನ ಮತ್ತೊಂದು ಚಿತ್ರಕ್ಕೆ ಸಂಗೀತ ನೀಡಲಿರುವ ರವಿ ಬಸ್ರೂರ್ : ಅಜನೀಶ್ ಲೋಕನಾಥ್ ಜಾಗಕ್ಕೆ ಕೆಜಿಎಫ್ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್

ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತೊಂದು ಮಲಯಾಳಂ ಚಿತ್ರಕ್ಕೆ ಮ್ಯೂಸಿಕ್ ನೀಡುತ್ತಿದ್ದಾರೆ. `ಕಟ್ಟಲನ್’ ಚಿತ್ರತಂಡವನ್ನು ಈಗ ರವಿ ಬಸ್ರೂರ್ ಸೇರಿದ್ದಾರೆ.

ಈ ಮೊದಲು ಮತ್ತೋರ್ವ ಖ್ಯಾತ ಸಂಗೀತ ನಿರ್ದೇಶಕ, ಕನ್ನಡಿಗ ಅಜನೀಶ್ ಲೋಕನಾಥ್ ಅವರನ್ನು ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಘೋಷಣೆ ಮಾಡಲಾಗಿತ್ತು. ಆದಾಗ್ಯೂ, `ಕಟ್ಟಲನ್’ ಬಿಡುಗಡೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಚಿತ್ರದ ತಾಂತ್ರಿಕ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಈ ಕೊನೆಯ ಕ್ಷಣದ ಬದಲಾವಣೆಗೆ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ.


2024 ರಲ್ಲಿ `ಮಾರ್ಕೊ’ ಚಿತ್ರದ ಮೂಲಕ ರವಿ ಬಸ್ರೂರ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಆಂಥೋನಿ ವರ್ಗೀಸ್ ನಾಯಕನಾಗಿರುವ `ಕಟ್ಟಲನ್’, ದಂತ ಕಳ್ಳಸಾಗಣೆ ಹಿನ್ನೆಲೆಯಲ್ಲಿ ನಡೆಯುವ ಆಕ್ಷನ್ ಥ್ರಿಲ್ಲರ್ ಆಗಿದೆ. ಪಾಲ್ ಜಾರ್ಜ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ. ಮೇ 14 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Show More

Leave a Reply

Your email address will not be published. Required fields are marked *

Back to top button