Special Desk

ಈ ನಾಲ್ಕು ಅಭ್ಯಾಸಗಳ ಪಾಲನೆಯಿಂದ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||

ಭಗವದ್ಗೀತೆಯ ಈ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಸಮತೋಲಿತ ಬದುಕಿನ ಬಗ್ಗೆ ಹೇಳುತ್ತಾನೆ. ನಮ್ಮ ಆಹಾರ, ನಿದ್ದೆ, ಕೆಲಸ ಹಾಗೂ ವಿಹಾರದಲ್ಲಿ ಸಮತೋಲನ ಅಗತ್ಯ ಎನ್ನುವುದು ಈ ಶ್ಲೋಕದ ತಾತ್ಪರ್ಯ.

ನಮಗೆ ಆಹಾರ ಅಗತ್ಯ. ಬದುಕಿಗಾಗಿ ಊಟ ಮಾಡಬೇಕು, ಆದರೆ ಯಾವತ್ತೂ ಅಧಿಕ ಆಹಾರ ಸೇವಿಸಬಾರದು, ಕಡಿಮೆಯೂ ಸೇವಿಸಬಾರದು. ವಿಶ್ರಾಂತಿಯೂ ನಮ್ಮ ಬದುಕಿನ ಪ್ರಮುಖಾಂಶ. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ಗುಣಮಟ್ಟದ ನಿದ್ದೆಯನ್ನು ಮಾಡಬೇಕು.

ಕೆಲಸದ ವಿಷಯದಲ್ಲಿ ಜವಾಬ್ದಾರಿಯುತವಾಗಿರಬೇಕು ನಿಜ, ಹಾಗಂತ ಬದುಕಿನ ಎಲ್ಲಾ ಖುಷಿಗಳನ್ನು ಮರೆತು ಬರೀ ಕೆಲಸ ಕೆಲಸ ಎಂದು ಓಡಾಡುವುದಲ್ಲ. ಇನ್ನು ವಿಹಾರ. ನಮಗೆ ವಿಹಾರ-ಮನೋರಂಜನೆ ಅಗತ್ಯ. ಹಾಗಂತ ಇದನ್ನೇ ಮಿತಿಗಿಂತ ಹೆಚ್ಚು ಮಾಡಬೇಡಿ ಹಾಗೂ ಕಡಿಮೆಯೂ ಮಾಡಬೇಡಿ. ಇಲ್ಲೂ ಸಮತೋಲನ ಅಗತ್ಯ.

ಈ ಅಭ್ಯಾಸಗಳಿಂದ ಬದುಕನ್ನು ಸಮತೋಲನ ಮಾಡಬಹುದು, ಬದುಕಿನ ಖುಷಿ ಅನುಭವಿಸಬಹುದು.

Show More

Related Articles

Leave a Reply

Your email address will not be published. Required fields are marked *

Back to top button