Kollywood

ಸಮಂತಾ ಫಿಟ್ನೆಸ್ ಮಂತ್ರ : ಬೆಳಗಿನ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಖ್ಯಾತ ನಟಿಯ 8 ಟಿಪ್ಸ್

ಬೆಳಗಿನ ದಿನಚರಿ ಉತ್ತಮವಾಗಿದ್ದರೆ ಆ ದಿನ ಇನ್ನಷ್ಟು ಉತ್ತಮವಾಗಿ ಸಾಗುತ್ತದೆ. ಹೀಗಾಗಿ ನಮ್ಮ ಜೀವನಶೈಲಿಯಲ್ಲಿ ಶಿಸ್ತನ್ನು ತರುವುದು ಬಲು ಮುಖ್ಯ. ಇದೀಗ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ತನ್ನ ಫಿಟ್ನೆಸ್ ಸೀಕ್ರೆಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಾವು ಪಾಲಿಸುತ್ತಿರುವ ಬೆಳಗಿನ ದಿನಚರಿಯ ಬಗ್ಗೆ ಮಾತನಾಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ಸಮಂತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಈ ದಿನಚರಿಯನ್ನು ಇವರು `ಪವರ್ ಮಾರ್ನಿಂಗ್’ ಎಂದು ಕರೆದಿದ್ದಾರೆ.

 

View this post on Instagram

 

A post shared by Samantha (@samantharuthprabhuoffl)

ಸಮಂತಾರ 8 ಟಿಪ್ಸ್

  • ಬೆಳಗ್ಗೆ ಎದ್ದ ತಕ್ಷಣ 1 ಗಂಟೆ ಮೊಬೈಲ್ ಫೋನ್ ಅಥವಾ ಯಾವುದೇ ಡಿಜಿಟಲ್ ಡಿವೈಜ್‍ಗಳಿಂದ ದೂರ ಇರಿ
  • ಮುಂಜಾನೆ ಎಚ್ಚರವಾದ ತಕ್ಷಣ ಐದು ನಿಮಿಷ ಮೌನವಾಗಿ ಕುಳಿತು ಆಳವಾಗಿ ಉಸಿರಾಡಿ
  • ಬಳಿಕ 10 ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿಯೊಡ್ಡಿ
  • ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ, ಅರಿಶಿಣ, ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿದ ಪೇಯ ಕುಡಿಯಿರಿ
  • ಸಮತೋಲಿತ ಉಪಾಹಾರ ಸೇವಿಸಿ. ಇದು ರಕ್ತದ ಸಕ್ಕರೆಯ ಮಟ್ಟವನ್ನು ಸಮತೋಲನ ಮಾಡುತ್ತದೆ
  • ಬೆಳಿಗ್ಗೆ 11 ಗಂಟೆಯೊಳಗೆ ಎಲ್ಲಾ ವ್ಯಾಯಾಮಗಳನ್ನು ಮುಗಿಸಿ
  • ಉಪಾಹಾರದ ಬಳಿಕ ಕಾಫಿ ಅಥವಾ ಟೀ ಕುಡಿಯಿರಿ
  • ಆ ದಿನ ನೀವು ಜಯಿಸಲು ಬಯಸಿದ ಒಂದು ವಿಷಯವನ್ನು ನಿರ್ಧರಿಸಿ. ಇದನ್ನು ಬರೆದಿಡಿ

ಹೀಗೆ ಸಮಂತಾ ಎಂಟು ಟಿಪ್ಸ್ ಅನ್ನು ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ಗಮನ ಸೆಳೆದಿದೆ. ಜೊತೆಗೆ ಹಲವರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ತಮನ್ನಾ ಕೂಡಾ This is so wholesome ❤️ಎಂದು ಬರೆದುಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button