Tollywood
ಹೈದರಾಬಾದ್ನಲ್ಲಿ ಭವ್ಯ ಬಂಗಲೆ ನಿರ್ಮಿಸುತ್ತಿರುವ ಅಲ್ಲು ಅರ್ಜುನ್ : ಬಜೆಟ್ ಎಷ್ಟು ಕೋಟಿ ರೂಪಾಯಿ ಗೊತ್ತಾ!
ದಕ್ಷಿಣದ ಸ್ಟಾರ್ ನಟ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ ತನ್ನ ಕನಸಿನ ಬಂಗಲೆ ನಿರ್ಮಿಸುತ್ತಿದ್ದಾರೆ. ಜುಬಿಲಿ ಹಿಲ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಈ ಮನೆಯ ಬಜೆಟ್ 100 ಕೋಟಿ ರೂಪಾಯಿ. ಹೀಗೆ ನೂರು ಕೋಟಿ ರೂಪಾಯಿ ವೆಚ್ಚದ ಈ ಮನೆಯಲ್ಲಿ ಸಕಲ ಐಷಾರಾಮಿ ವ್ಯವಸ್ಥೆಗಳೂ ಇರಲಿದೆ.
ಹೊಸ ಮನೆಯ ನಿರ್ಮಾಣ ಕಾರ್ಯ ಈಗಾಗಲೇ ನಡೆಯುತ್ತಿದೆ. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಯ ಪಕ್ಕದಲ್ಲಿಯೇ ಈ ಮನೆಯೂ ಇರಲಿದೆ.
ಅಲ್ಲು ಅರ್ಜುನ್ ಶೀಘ್ರದಲ್ಲೇ ತಮ್ಮ ಕುಟುಂಬದೊಂದಿಗೆ ತಮ್ಮ ಹೊಸ ಮನೆಗೆ ತೆರಳುವ ನಿರೀಕ್ಷೆಯಿದೆ. ಸದ್ಯ ಅಟ್ಲೀ ನಿರ್ದೇಶನದ `ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಅಲ್ಲು ನಟಿಸುತ್ತಿದ್ದಾರೆ. ಜೊತೆಗೆ ಲೋಕೇಶ್ ಕನಕರಾಜ್ ಅವರೊಂದಿಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.



