ಪ್ರಶಾಂತ್ ನೀಲ್ – ಜ್ಯೂ. ಎನ್ಟಿಆರ್ ಕಾಂಬಿನೇಷನ್ನ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಈ ಸಿನಿಮಾ ನೋಡಲು ಅಭಿಮಾನಿಗಳು ಒಂದು ವರ್ಷ ಕಾಯಬೇಕಾಗಿದೆ. ಯಾಕೆಂದರೆ ಈ ಸಿನಿಮಾ ರಿಲೀಸ್ ಆಗುತ್ತಿರುವುದು 2027ರ ಜೂನ್ 11ರಂದು.
HIS REIGN… HIS SOIL…
JUNE 11, 2027… IT IS…. #NTRNeel pic.twitter.com/ln9Dq4BFZs— Jr NTR (@tarak9999) April 21, 2026
ಕೆಲ ದಿನಗಳ ಹಿಂದೆ ಈ ಸಿನಿಮಾದ ಶೂಟಿಂಗ್ ಆರಂಭವಾದಾಗ ಅಭಿಮಾನಿಗಳು ಪುಳಕಗೊಂಡಿದ್ದರು. ಇದೀಗ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಇವರ ಖುಷಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಜೊತೆಗೆ ಜೂನಿಯರ್ ಎನ್ ಟಿ ಆರ್ ಅವರ ಹುಟ್ಟುಹಬ್ಬವಾದ ಮೇ 20 ರಂದು ಚಿತ್ರದ ಗ್ಲಿಮ್ಸ್ ಅನ್ನು ಬಿಡುಗಡೆ ಮಾಡುವುದಾಗಿಯೂ ಚಿತ್ರದ ತಯಾರಕರು ತಿಳಿಸಿದ್ದಾರೆ.
ಚಿತ್ರಕ್ಕೆ ತಾತ್ಕಾಲಿಕವಾಗಿ ಡ್ರ್ಯಾಗನ್ ಎಂದು ಹೆಸರಿಸಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.



