Tollywood
ಮುಂಬೈನಲ್ಲಿ ಮನೆ ಮಾಡಿದ ಅಲ್ಲು ಅರ್ಜುನ್ : ತಿಂಗಳ ಬಾಡಿಗೆಯೇ 16 ಲಕ್ಷ ರೂಪಾಯಿ
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಕೆಲಸದ ನಿಮಿತ್ತ ಮುಂಬೈಯಲ್ಲೂ ಐಷಾರಾಮಿ ಮನೆ ಬಾಡಿಗೆಗೆ ಪಡೆದಿದ್ದಾರೆ. ಜುಹು ಪ್ರದೇಶದಲ್ಲಿ ಐದು ಮಲಗುವ ಕೋಣೆಗಳ ಐಷಾರಾಮಿ ಅಪಾಟ್ಮೆರ್ಂಟ್ ಅನ್ನು ಅಲ್ಲು ಬಾಡಿಗೆಗೆ ಪಡೆದಿದ್ದಾರೆ. ಈ ಮನೆಯ ಮಾಸಿಕ ಬಾಡಿಗೆ 16 ಲಕ್ಷ ರೂಪಾಯಿ ಹಾಗೂ ಮೂರು ವರ್ಷದ ಅವಧಿಗೆ ಈ ಮನೆಯನ್ನು ಇವರು ಗುತ್ತಿಗೆಗೆ ಪಡೆದಿದ್ದಾರೆ.
ಅಲ್ಲು ಅರ್ಜುನ್ ಶಾಶ್ವತವಾಗಿ ಮುಂಬೈಗೆ ಸ್ಥಳಾಂತರವಾಗುವ ಯೋಚನೆ ಹೊಂದಿಲ್ಲದಿದ್ದರೂ ಅವರ ಶೂಟಿಂಗ್ ವೇಳಾಪಟ್ಟಿಯಿಂದಾಗಿ ಅವರು ಮುಂಬೈನಲ್ಲಿ ಸ್ವಲ್ಪ ಸಮಯ ಕಳೆಯುತ್ತಾರೆ. ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಕೂಡಾ ಇದೇ ಅಪಾರ್ಟ್‍ಮೆಂಟ್‍ನಲ್ಲಿ ಮನೆ ಹೊಂದಿದ್ದಾರೆ.



