Special Desk

ಮನೆಯಲ್ಲಿ ಕಾಮಧೇನು ಮೂರ್ತಿ ಇರಿಸುವ ಮಹತ್ವ

ಹಿಂದೂ ಪುರಾಣದ ಪ್ರಕಾರ ಕಾಮಧೇನು ಎನ್ನುವುದು ಇಷ್ಟಾರ್ಥಗಳನ್ನು ಕರುಣಿಸುವ ದೈವಿಕ ಹಸು. ದೇವಲೋಕದ ಈ ಹಸುವನ್ನು ಸುರಭಿ ಎಂದೂ ಕರೆಯಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಈ ಪವಿತ್ರ ಹಸು ಸಮೃದ್ಧಿ, ಸಂಪತ್ತು, ಆರೋಗ್ಯ, ಶಾಂತಿ ಹಾಗೂ ಆಧ್ಯಾತ್ಮಿಕ ಉನ್ನತಿಯ ಪ್ರಬಲ ಸಂಕೇತವಾಗಿದೆ. ಹೀಗಾಗಿ ಮನೆಯಲ್ಲಿ ಕಾಮಧೇನುವಿನ ಪ್ರತಿಮೆ ಇರಿಸುವುದಕ್ಕೆ ನಮ್ಮಲ್ಲಿ ಸಾಕಷ್ಟು ಮಹತ್ವವಿದೆ.

ಮನೆಯಲ್ಲಿ ಕಾಮಧೇನುವಿನ ಮೂರ್ತಿ ಇರಿಸುವ ಮೂಲಕ ನೀವು ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಾಮರಸ್ಯದ ಸಂಬಂಧಗಳನ್ನು ಬೆಳೆಸುವ ದೈವಿಕ ಆಶೀರ್ವಾದಗಳನ್ನು ಆಹ್ವಾನಿಸುತ್ತೀರಿ ಎನ್ನುವ ನಂಬಿಕೆ ಇದೆ. ಈ ಪ್ರತಿಮೆ ಪವಿತ್ರ ಹಾಗೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದಲ್ಲದೆ, ಆಧ್ಯಾತ್ಮಿಕ ದಾರಿದೀಪವಾಗಿಯೂ ಕಾರ್ಯನಿರ್ವಹಿಸುತ್ತದೆ, ಇದು ಒಬ್ಬರ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವ ನಂಬಿಕೆ ಆಸ್ತಿಕರದ್ದು.

ದೈವಿಕ ಆಶಯಗಳನ್ನು ಪೂರೈಸುವ ಪವಿತ್ರ ಹಸುವಾಗಿ, ಕಾಮಧೇನು ಲಕ್ಷ್ಮಿಯನ್ನು ಸಂಕೇತಿಸುತ್ತದೆ. ನಂಬಿಕೆಗಳ ಪಕಾರ, ಮನೆಯಲ್ಲಿ ಕಾಮಧೇನು ಪ್ರತಿಮೆಯನ್ನು ಇರಿಸುವುದು ಜೀವನಕ್ಕೆ ಸಮೃದ್ಧಿ ಮತ್ತು ಸಂಪತ್ತನ್ನು ಆಹ್ವಾನಿಸುತ್ತದೆ ಎನ್ನಲಾಗುತ್ತದೆ.

ವಾಸ್ತುಪ್ರಕಾರ, ಈ ಪ್ರತಿಮೆಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇರಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಇದು ಮನೆಯ ಸುತ್ತಲೂ ರಕ್ಷಣಾತ್ಮಕ ಪ್ರಭಾವಲಯವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಈ ದೈವಿಕ ಹಸುವಿನ ಶಕ್ತಿಯು ನಕಾರಾತ್ಮಕ ಪ್ರಭಾವಗಳನ್ನು ತೊಡೆದು ಹಾಕಿ ಶಾಂತ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದೂ ನಂಬಲಾಗುತ್ತದೆ.

Show More

Related Articles

Leave a Reply

Your email address will not be published. Required fields are marked *

Back to top button