Special Desk

ಭಗವಾನ್ ಶ್ರೀಕೃಷ್ಣರ ಕಿರೀಟದಲ್ಲಿರುವ ನವಿಲು ಗರಿಗೂ ಶ್ರೀರಾಮ ದೇವರಿಗೂ ಇರುವ ಸಂಬಂಧ

ಮುರಾರಿಯ ಕಿರೀಟದಲ್ಲಿರುವ ನವಿಲು ಗರಿಯ ಹಿಂದಿದೆ ಅದ್ಭುತ ಕಥೆ. ಅದು ತ್ರೇತಾಯುಗದಲ್ಲಿ ಭಗವಾನ್ ಶ್ರೀರಾಮ-ಸೀತಾಮಾತೆಯ ವನವಾಸದ ಸಮಯ. ಹೀಗೆ ದಟ್ಟ ಕಾನನದಲ್ಲಿ ಸಾಗುತ್ತಿದ್ದಾಗ ಸೀತಾಮಾತೆಗೆ ಬಾಯಾರಿಕೆಯಾಗಿತ್ತು. ಈ ವೇಳೆ ಶ್ರೀರಾಮದೇವರು ಸಹಾಯ ಮಾಡುವಂತೆ ಪ್ರಕೃತಿಯನ್ನು ಪ್ರಾರ್ಥಿಸಿದ್ದರು. ಆಗ ಅಲ್ಲಿ ಒಂದು ಸುಂದರ ನವಿಲು ಕಾಣಿಸಿಕೊಂಡಿತು

`ನೀರು ಎಲ್ಲಿದೆ ಎಂದು ತಿಳಿದಿದೆ. ಆದರೆ ನನಗೆ ಹಾರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಅನುಸರಿಸಿ, ದಾರಿ ತೋರಿಸುತ್ತೇನೆ’ ಎಂದಿತ್ತು ನವಿಲು. ಕಾಡಿನ ಅಂಕುಡೊಂಕಾದ ಹಾದಿಯಲ್ಲಿ ಸೀತಾ-ರಾಮರು ನವಿಲನ್ನು ಹಿಂಬಾಲಿಸಿಕೊಂಡು ಸಾಗಿದರು. ಹೀಗೆ ಕಾಡಿನಲ್ಲಿ ಸಾಗುವಾಗ ದಾರಿ ಗುರುತಿಗಾಗಿ ನವಿಲು ತನ್ನ ಬಾಲದ ಗರಿಗಳನ್ನು ಬೀಳಿಸಿತ್ತಾ ಸಾಗಿತ್ತು. ಗರಿಗಳನ್ನು ಬಲವಂತವಾಗಿ ತೆಗೆದುಹಾಕುವುದು ತನ್ನ ಸಾವಿಗೆ ಕಾರಣವಾಗಬಹುದೆಂದು ತಿಳಿದಿದ್ದರೂ ನವಿಲು ತನ್ನ ಗರಿಗಳನ್ನು ಬೀಳಿಸಿ ದಂಪತಿಗೆ ದಾರಿ ತೋರಿಸುತ್ತಿತ್ತು.

ಹೀಗೆ ಸಾಗುತ್ತಾ ಶ್ರೀರಾಮ-ಸೀತಾಮಾತೆ ನೀರಿದ್ದ ಜಾಗ ತಲುಪಿ, ಬಾಯಾರಿಕೆ ತಣಿಸಿ ವಿಶ್ರಾಂತಿ ಪಡೆದರು. ಇತ್ತ ಇಬ್ಬರಿಗೂ ಸಹಾಯ ಮಾಡಿದ್ದ ನವಿಲು ನಿಸ್ತೇಜವಾಗಿ ಬಿದ್ದಿತ್ತು. ಈ ತ್ಯಾಗಮಯಿ ಪಕ್ಷಿಯ ನಿಸ್ವಾರ್ಥ ಸೇವೆ ಸೀತಾ ರಾಮರ ಹೃದಯ ತುಂಬಿಸಿ ಭಾವುಕರನ್ನಾಗಿಸಿತ್ತು. ಆಗ ನವಿಲನ್ನು ನಯವಾಗಿ ಸವರುತ್ತಾ ಶ್ರೀರಾಮ ದೇವರು, `ನಿನ್ನ ದಯೆ, ಶೌರ್ಯವನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಮುಂದಿನ ಜನ್ಮದಲ್ಲಿ ನಾನು ನಿನ್ನ ನೆನಪನ್ನು ಗೌರವಿಸುತ್ತೇನೆ’ ಎಂದು ವಾಗ್ದಾನ ನೀಡಿದ್ದರು.

ಕೊಟ್ಟ ಮಾತಿನಂತೆ ಮುಂದಿನ ಶ್ರೀಕೃಷ್ಣನ ಅವತಾರದಲ್ಲಿ ನವಿಲಿನ ತ್ಯಾಗದ ಸಂಕೇತವಾಗಿ ಗರಿಯನ್ನು ತನ್ನ ಕಿರೀಟದಲ್ಲಿ ಇರಿಸಿದರು ಎನ್ನುವುದು ಕಥೆ. ನವಿಲು ಗರಿಗಳು ಹಾಗೂ ಶ್ರೀಕೃಷ್ಣನ ನಡುವಿನ ಸಂಬಂಧದ ಬಗ್ಗೆ ಹಲವು ಕಥೆಗಳು ಸಿಕ್ಕರು ಈ ಕಥೆ ಸಾಕಷ್ಟು ಜನಪ್ರಿಯವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button