Tollywood

ಶೂಟಿಂಗ್ ಸೆಟ್‍ನಲ್ಲಾದ ಕಹಿ ಅನುಭವ ಹಂಚಿಕೊಂಡ ನಟ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಶೂಟಿಂಗ್ ಸೆಟ್‍ನಲ್ಲಿ ತಮಗಾದ ಕಹಿ ಅನುಭವವನ್ನು ಈಗ ಹಂಚಿಕೊಂಡಿದ್ದಾರೆ. ಒಮ್ಮೆ ಸಹಾಯಕ ನಿರ್ದೇಶಕರೊಬ್ಬರು ತನ್ನ ಯಾವುದೇ ಅನುಮತಿ ಇಲ್ಲದೆ ಅನಿರೀಕ್ಷಿತವಾಗಿ ಕ್ಯಾರಾವಾನ್ ಪ್ರವೇಶಿಸಿ ತನ್ನ ಶರ್ಟ್ ತೆಗೆದು ತನ್ನ ಎದೆಯ ಮೇಲಿದ್ದ ಟ್ಯಾಟೂ ತೋರಿಸಿದ ಆಘಾತಕಾರಿ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.

`ಕೆಲ ದಿನಗಳ ಹಿಂದೆ ನಾನು ಒಂದು ಸಿನಿಮಾದ ಶೂಟಿಂಗ್ ಮುಗಿಸಿ ಕ್ಯಾರಾವಾನ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಸಹಾಯಕ ನಿರ್ದೇಶಕರೊಬ್ಬರು ಇದ್ದಕ್ಕಿದ್ದಂತೆಯೇ ಕ್ಯಾರಾವಾನ್ ಪ್ರವೇಶಿಸಿ, ಶರ್ಟ್ ತೆಗೆದು ತಮ್ಮ ಎದೆಯ ಮೇಲೆ ನನ್ನ ಹೆಸರಿನ ಹಚ್ಚೆ ಇರುವುದನ್ನು ತೋರಿಸಿದರು. ಇದರಿಂದ ಒಂದು ಕ್ಷಣ ನಾನು ಆಘಾತಕ್ಕೊಳಗಾಗಿದ್ದೆ. ನನ್ನ ಕೈ ಕಾಲುಗಳು ನಡುಗಿದ್ದವು. ಹೀಗೆ ಮಾಡಿದರೆ ನಾನು ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದು ಎಚ್ಚರಿಸಿ ಅವರನ್ನು ಕಳುಹಿಸಿದೆ. ಒಬ್ಬ ಮಹಿಳೆ ಒಂಟಿಯಾಗಿರುವಾಗ ಹೀಗೆ ಒಳಗೆ ಬರುವುದು ಸರಿಯಲ್ಲ. ಎಷ್ಟು ದೊಡ್ಡ ಅಭಿಮಾನಿಯಾಗಿದ್ದರೂ ಇಂತಹ ನಡವಳಿಕೆ ಸೂಕ್ತವಲ್ಲ’ ಎಂದು ಕಾಜಲ್ ಹೇಳಿಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button