Kollywood

ಜನನಾಯಗನ್ ಸೋರಿಕೆ : ಮತ್ತೆ ಮೂವರ ಬಂಧನ

ವಿಜಯ್ ನಟನೆಯ ಜನನಾಯಗನ್ ಚಿತ್ರದ ಸಂಪೂರ್ಣ ಸೋರಿಕೆಗೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೊನ್ನೆ ಭಾನುವಾರ ಏಪ್ರಿಲ್ 12ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು.

ಸದ್ಯ ಮೂವರ ಬಂಧನದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಚೆನ್ನೈ ಸೈಬರ್ ಕ್ರೈಮ್ ಪೆÇಲೀಸರು, ಪ್ರಮುಖ ಆರೋಪಿ ಫ್ರೀಲ್ಯಾನ್ಸ್ ಎಡಿಟರ್ ಎಂಬುದನ್ನು ತಿಳಿಸಿದ್ದಾರೆ. ಈತನಿಗೆ ಫಿಲಂನ ಫೂಟೇಜ್‍ನ ಎಕ್ಸಸ್ ಸಿಕ್ಕಿದ ಬಳಿಕ ಈತ ಅದನ್ನು ಕದ್ದಿದ್ದ. ರೆಂಡರ್ ಮಾಡಿದ ಬಳಿಕ ಈತ ಸಹ ಆರೋಪಿಗೆ ಈ ವಿಡಿಯೋ ಕಳಿಸಿದ ಬಳಿಕ ಅದು ಇನ್ನಷ್ಟು ಹರಿದಾಡಲು ಆರಂಭಿಸಿತ್ತು.

ಈ ಸೋರಿಕೆ ಬಳಿಕ ಚಿತ್ರರಂಗದ ಪ್ರಮುಖ ಈ ಘಟನೆಯನ್ನು ಖಂಡಿಸಿದ್ದರು. ಜೊತೆಗೆ ಈ ಸಂಪೂರ್ಣ ಚಿತ್ರವನ್ನು ಕೇಬಲ್‍ನಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಏಪ್ರಿಲ್ 14 ರಂದು, ಕೊಯಮತ್ತೂರಿನಲ್ಲಿ ಕೇಬಲ್ ಆಪರೇಟರ್ ಒಬ್ಬನನ್ನು ಬಂಧಿಸಲಾಗಿತ್ತು.

Show More

Related Articles

Leave a Reply

Your email address will not be published. Required fields are marked *

Back to top button