ಔಡಿ ಕಾರಿನ ಬೆಲೆಯೂ ಏರಿಕೆ : ಏಪ್ರಿಲ್ 1 ರಿಂದಲೇ ಪರಿಷ್ಕೃತ ರೇಟ್ ಜಾರಿ
ಔಡಿ ಇಂಡಿಯಾ ಭಾರತದಲ್ಲಿ ತನ್ನ ಮಾದರಿ ಶ್ರೇಣಿಯಾದ್ಯಂತ ಬೆಲೆ ಏರಿಕೆ ಘೋಷಿಸಿದೆ. ಈ ಪರಿಷ್ಕರಣೆಯು 2026ರ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ. ಹೀಗಾಗಿ ಔಡಿ ಕಾರಿನ ಬೆಲೆಯಲ್ಲಿ ಶೇಕಡಾ 2 ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಎಲ್ಲಾ ಔಡಿ ಮಾದರಿಗಳ ಎಕ್ಸ್ ಶೋರೂಮ್ ಬೆಲೆಗಳಿಗೆ ಅನ್ವಯಿಸುತ್ತದೆ.
ಈ ಐಷಾರಾಮಿ ಬ್ರ್ಯಾಂಡ್ ಪ್ರಸ್ತುತ ದೇಶದಲ್ಲಿ ಹಲವಾರು ಐಷಾರಾಮಿ ಸೆಡಾನ್‍ಗಳು ಮತ್ತು ಎಸ್‍ಯುವಿಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚುತ್ತಿರುವ ತಯಾರಿಕಾ ವೆಚ್ಚ ಹಾಗೂ ಕರೆನ್ಸಿ ಮೌಲ್ಯದಲ್ಲಿನ ಏರಿಳಿತದಿಂದ ಬೆಲೆ ಪರಿಷ್ಕರಣೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ಮಾರ್ಚ್ 17 ರಂದು ದೇಶದಲ್ಲಿ ಹೊಸ ಔಡಿ ಎಸ್‍ಕ್ಯೂ8 ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಸಂದರ್ಭದಲ್ಲಿಯೇ ಬೆಲೆ ಪರಿಷ್ಕರಣೆ ಘೋಷಣೆಯಾಗಿದೆ. ಇದಲ್ಲದೆ, ಮತ್ತೊಂದು ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್-ಬೆನ್ಜ್ ಕೂಡಾ ಏಪ್ರಿಲ್ 1ರಿಂದ ಜಾರಿಯಾಗುವಂತೆ ಶೇಕಡಾ 2ರಷ್ಟು ಬೆಲೆ ಏರಿಕೆಯನ್ನು ಘೋಷಣೆ ಮಾಡಿದೆ.



