ಮಹೀಂದ್ರಾ ಬಿಇ 6 ಫಾರ್ಮುಲಾ ಇ ಎಸ್ಯುವಿ ಖರೀದಿಸಿದ ನಟ ಅಜಿತ್ ಕುಮಾರ್ : ಏನಿದರ ವಿಶೇಷತೆ?
ಚೆನ್ನೈ : ತಮಿಳಿನ ಸ್ಟಾರ್ ನಟ ಹಾಗೂ ವೃತ್ತಿಪರ ರೇಸರ್ ಅಜಿತ್ ಕುಮಾರ್ ಹೊಸ ಕಾರನ್ನು ಖರೀದಿಸಿದ್ದಾರೆ. ಮಹೀಂದ್ರಾ ಬಿಇ 6 ಫಾರ್ಮುಲಾ ಇ ಎಸ್ಯುವಿ ಅನ್ನು ಅಜಿತ್ ಮಹೀಂದ್ರಾ ಕಂಪನಿಯ ಆಟೋಮೋಟಿವ್ ಟೆಕ್ನಾಲಜಿ ಆಂಡ್ ಪ್ರಾಡಕ್ಟ್ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ ಆರ್.ವೇಲುಸಾಮಿ ಅವರಿಂದ ಡೆಲಿವರಿ ಪಡೆದಿದ್ದಾರೆ.

ಅಜಿತ್ ಅವರು ಈ ಎಲೆಕ್ಟ್ರಿಕ್ ಎಸ್ಯುವಿಯನ್ನು ಡೆಲಿವರಿ ಪಡೆಯುತ್ತಿರುವುದನ್ನು ಮಹೀಂದ್ರಾ ಎಲೆಕ್ಟ್ರಿಕ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದೆ. ಜೊತೆಗೆ ಆನಂದ್ ಮಹೀಂದ್ರಾ ಅವರು ಕೂಡಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಕಂಪನಿಯ ವೆಬ್ಸೈಟಿನ ಪ್ರಕಾರ ಎಫ್ಇ2 ವರ್ಷನ್ನ ಬೆಲೆ ರೂಪಾಯಿ 23.69 ಲಕ್ಷವಾದರೆ, ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರುವ ಎಫ್ಇ3 ವೇರಿಯೆಂಟ್ನ ಬೆಲೆ 24.49 ಲಕ್ಷ ರೂಪಾಯಿಯಾಗಿದೆ. ಅಜಿತ್ ಅವರು ಫಾರ್ಮುಲಾ ಇ-ಪ್ರೇರಿತ ಎಸ್ಯುವಿಯ ಟ್ಯಾಂಗೋ ರೆಡ್ ಬಣ್ಣದ ರೂಪಾಂತರವನ್ನು ಖರೀದಿಸಿದ್ದು, ಇದರ ಟಾಪ್ ಸ್ಪೀಡ್ ಗಂಟೆಗೆ 202 ಕಿಮೀ.
Can’t help quoting the old ad: ‘Made for each other’
Superstar Ajith Kumar & the Mahindra BE 6 Formula E edition.
I look forward to congratulating and thanking him in person one day soon… https://t.co/wmkjABNhQu
— anand mahindra (@anandmahindra) March 14, 2026
ಹೊಸ `ಬಿಇ 6 ಫಾರ್ಮುಲಾ ಇ ಎಡಿಷನ್’ ಎಲೆಕ್ಟ್ರಿಕ್ ಎಸ್ಯುವಿಯು ಬಲಿಷ್ಠವಾದ 79 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ನ್ನು ಒಳಗೊಂಡಿದೆ. ಪೂರ್ಣ ಚಾರ್ಜ್ನಲ್ಲಿ ಇದು 682 ಕಿ.ಮೀ ವರೆಗೆ ರೇಂಜ್ ಅನ್ನು ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್, 285 ಪಿಎಸ್ ಹಾರ್ಸ್ ಪವರ್ ಶಕ್ತಿ ಹಾಗೂ 380 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಹೊರಹಾಕುತ್ತದೆ.



