2026ರಲ್ಲಿ ಮೋಹನ್ ಲಾಲ್ ಫುಲ್ ಬ್ಯುಸಿ : ಏಳು ನಿರ್ದೇಶಕರೊಂದಿಗೆ ಚಿತ್ರಕ್ಕೆ ಸಹಿ
ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ತನ್ನದೇ ಆದ ಛಾಪನ್ನು ಮೂಡಿಸಿರುವ ನಟ. ತನ್ನ ಈ ವಯಸ್ಸಿನಲ್ಲೂ ಸಿನಿಲೋಕದಲ್ಲಿ ಸಕ್ರಿಯರಾಗಿರುವ ಮೋಹನ್ ಲಾಲ್ ಈ ವರ್ಷ ಸಖತ್ ಬ್ಯುಸಿ ಇರಲಿದ್ದಾರೆ. ಮಲಯಾಳಂ ಸೇರಿ ಹಲವು ಪ್ರಾಜೆಕ್ಟ್ಗಳು ಮೋಹನ್ಲಾಲ್ ಮುಂದಿವೆ. ಸದ್ಯದ ಮಾಹಿತಿ ಪ್ರಕಾರ ಮೋಹನ್ಲಾಲ್ ಅವರು ಏಳು ನಿರ್ದೇಶಕರೊಂದಿಗೆ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಜೊತೆಗೆ ಇದರಲ್ಲಿ ಮೊದಲನೇ ಪ್ರಾಜೆಕ್ಟ್ನ ಕೆಲಸ ಕೂಡಾ ಆರಂಭವಾಗಿದೆ.
ಸದ್ಯ ಮೋಹನ್ಲಾಲ್ ಅವರು ಇನ್ನೂ ಹೆಸರಿಡದ ` L 366′ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ತರುಣ್ ಮೂರ್ತಿ ಈ ಚಿತ್ರವನ್ನು ನಿರ್ದೇಶಿಸಿದರೆ, ಆಶಿಕ್ ಉಸ್ಮಾನ್ ನಿರ್ಮಿಸುತ್ತಿದ್ದಾರೆ. ಮೇ ವೇಳೆಗೆ ಈ ಚಿತ್ರದ ಚಿತ್ರೀಕರಣ ಅಂತ್ಯವಾಗುವ ನಿರೀಕ್ಷೆ ಇದೆ.
ಇದಾದ ಬಳಿಕ ಮೋಹನ್ ಲಾಲ್ ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ವಿಷ್ಣು ಮೋಹನ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೆ, ಪ್ರಿಯದರ್ಶನ್, ದಿಲೀಷ್ ಪೋಥನ್, ಸತ್ಯನ್ ಅಂತಿಕಾದ್, ಜೂಡ್ ಅಂಟನಿ ಜೋಸೆಫ್ ಮತ್ತು ಜೀತು ಜೋಸೆಫ್ ಅವರೊಂದಿಗಿನ ಪ್ರಾಜೆಕ್ಟ್ಗಳೂ ಮೋಹಲ್ಲಾಲ್ ಕೈಯಲ್ಲಿ ಇವೆ.

