Tollywood

ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆಗೆ ಫಿದಾ ಆದ ತೆಲುಗು ಸ್ಟಾರ್ ವೆಂಕಟೇಶ್

ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಸಖತ್ ಫೇಮಸ್. ಸಾಕಷ್ಟು ಖ್ಯಾತನಾಮರು ಇಲ್ಲಿಗೆ ದೋಸೆ ಸವಿಯಲು ಬರುತ್ತಾರೆ. ಇದೀಗ ತೆಲುಗು ನಟ, ವಿಕ್ಟರಿ ವೆಂಕಟೇಶ್ ಅವರು ಕೂಡಾ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದು ಖುಷಿಪಟ್ಟಿದ್ದಾರೆ.

ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ವೆಂಕಟೇಶ್ ಮೃದುವಾದ ಇಡ್ಲಿಗಳು ಮತ್ತು ಗರಿಗರಿಯಾದ ವಡೆಯನ್ನು ಸವಿದರು. ಬಳಿಕ ಚೌ ಚೌ ಬಾತ್‌ ಸೇವಿಸಿ ರುಚಿಕರ ಮಸಾಲೆ ದೋಸೆಯನ್ನೂ ಆನಂದಿಸಿದರು. ಫಿಲ್ಟರ್ ಕಾಫಿಯನ್ನೂ ಹೀರುತ್ತಾ ವೆಂಕಟೇಶ್ ಖುಷಿಪಟ್ಟರು. ಈ ವಿಡಿಯೋವನ್ನು ವಿದ್ಯಾರ್ಥಿ ಭವನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.


ಹೀಗೆ ಆನಂದದಿಂದ ಉಪಾಹಾರ ಸವಿದ ವೆಂಕಟೇಶ್ ಸಿಬ್ಬಂದಿಯೊಂದಿಗೂ ಮಾತನಾಡುತ್ತಾ ಖುಷಿಪಟ್ಟರು.

Show More

Related Articles

Leave a Reply

Your email address will not be published. Required fields are marked *

Back to top button