ಜೈಲರ್ 2 ಮತ್ತು ಕಮಲ್ ಹಾಸನ್ ಜೊತೆಗಿನ ಚಿತ್ರ : ರಜನಿಕಾಂತ್ ಕೊಟ್ರು ಅಪ್ಡೇಟ್
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂಬರುವ ಜೈಲರ್ 2 ಹಾಗೂ ಕಮಲ್ ಹಾಸನ್ ಜೊತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ರಜನಿಕಾಂತ್, ನೆಲ್ಸನ್ ನಿರ್ದೇಶನದ ಜೈಲರ್ 2 ನ ಪ್ರಧಾನ ಛಾಯಾಗ್ರಹಣ ಪೂರ್ಣಗೊಂಡಿದ್ದು, ಚಿತ್ರ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಇನ್ನು ಚಿತ್ರದ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನಿರ್ಮಾಣ ಸಂಸ್ಥೆ ಶೀಘ್ರ ಬಿಡುಗಡೆ ದಿನಾಂಕ ಘೋಷಿಸಲಿದೆ’ ಎಂದು ಹೇಳಿದ್ದಾರೆ.
ಇನ್ನು ಕಮಲ್ ಹಾಸನ್ ಹಾಗೂ ರಜನಿಕಾಂತ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಸಿದ್ಧತೆಯೂ ನಡೆಯುತ್ತಿದೆ. ಈ ಸಿನಿಮಾವನ್ನೂ ನೆಲ್ಸನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಆಗಸ್ಟ್ನಲ್ಲಿ ಶುರುವಾಗಲಿದೆ ಎಂದು ರಜನಿಕಾಂತ್ ತಿಳಿಸಿದ್ದಾರೆ. 1981ರ `ತಿಲ್ಲು ಮುಲ್ಲು’ ಸಿನಿಮಾದ ನಂತರ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆಯಾಗಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಪೂರ್ಣ ಪ್ರಮಾಣದಲ್ಲಿ ಜೊತೆಯಾಗಿ ನಟಿಸಿದ್ದ ಸಿನಿಮಾ 1979ರ ಕೆ ಬಾಲಚಂದರ್ ನಿರ್ದೇಶನದ ನಿನೈತಲೆ ಇನಿಕ್ಕುಮ್. ಈ ಚಿತ್ರದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಕಮಲ್ ಹಾಸನ್, `ನನ್ನ ಸ್ನೇಹಿತ ರಜನಿಕಾಂತ್ ಜೊತೆಗಿನ ವಿಶೇಷ ಪುನರ್ಮಿಲನ. ಪ್ರತಿಯೊಂದು ಉತ್ತಮ ಪ್ರಯಾಣವೂ ಮತ್ತೊಂದು ಅಧ್ಯಾಯಕ್ಕೆ ಅರ್ಹವಾಗಿದೆ’ ಎಂದು ಖುಷಿ ವ್ಯಕ್ತಪಡಿಸಿದ್ದರು.
ಇನ್ಬನ್ ಉದಯನಿಧಿ ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ಕೂಡ ಈ ಪ್ರಾಜೆಕ್ಸ್ನಲ್ಲಿ ಇರಲಿದ್ದಾರೆ.



