Kollywood

ಚುನಾವಣೆಗೆ ಮುನ್ನ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ವಿಜಯ್ ಪಕ್ಷ!

ತಮಿಳುನಾಡಿನ ಚುನಾವಣಾ ಕಣ ರಂಗೇರಿದೆ. ಈ ಸಲ ನಟ ವಿಜಯ್ ಕೂಡಾ ತಮಿಳಗ ವೆಟ್ರಿ ಕಳಗಂ-ಟಿವಿಕೆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಚುನಾವಣೆಗೆ ವಾರ ಇರುವಾಗಲೇ ವಿಜಯ್ ಪಕ್ಷ ಒಂದು ಸೀಟು ಕಳೆದುಕೊಂಡಿದೆ. ಅಂದರೆ ಸರಿಯಾದ ಸಂಖ್ಯೆಯ ಪ್ರಸ್ತಾವಕರ ಸಹಿ ಇಲ್ಲದೇ ಇರುವ ಕಾರಣದಿಂದ ಎಡಪ್ಪಾಡಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಹಾಗೂ ಪರ್ಯಾಯ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ನಿಯಮಗಳ ಪ್ರಕಾರ, ಪ್ರತಿ ನಾಮಪತ್ರಕ್ಕೆ ಕನಿಷ್ಠ 10 ಪ್ರಸ್ತಾವಕರ ಬೆಂಬಲವಿರಬೇಕು. ಆದರೆ ಅಭ್ಯರ್ಥಿ ಅರುಣ್‍ಕುಮಾರ್ ಎಂ ಅವರ ಪತ್ರಗಳು ಕೇವಲ ಎಂಟು ಸಹಿಗಳನ್ನು ಹೊಂದಿದ್ದರೆ, ಪರ್ಯಾಯ ಅಭ್ಯರ್ಥಿ ನಿತ್ಯಾ ಕೇವಲ ಏಳು ಸಹಿಗಳನ್ನು ಸಲ್ಲಿಸಿದರು.

ಹೀಗಾಗಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಸೇಲಂ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಅಭ್ಯರ್ಥಿಯಿಲ್ಲದೆ ಚುನಾವಣಾ ಪ್ರವೇಶ ಮಾಡಿದೆ.

ಈ ನಡುವೆ ಈಗ ಅಭ್ಯರ್ಥಿ ಅರುಣ್‍ಕುಮಾರ್ ಕಾಣೆಯಾಗಿರುವುದರಿಂದ ಪರಿಸ್ಥಿತಿ ಪಕ್ಷಕ್ಕೆ ಮತ್ತಷ್ಟು ಬಿಕ್ಕಟ್ಟಾಗಿದೆ. ಅವರನ್ನು ಅಪಹರಿಸಿರಬಹುದು ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆಗೆ 234 ಶಾಸಕರನ್ನು ಆಯ್ಕೆ ಮಾಡುವ ಮತದಾನ ಏಪ್ರಿಲ್ 23 ರಂದು ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.

Show More

Related Articles

Leave a Reply

Your email address will not be published. Required fields are marked *

Back to top button