ಬಿಡುಗಡೆಗೆ ಮುನ್ನವೇ ವಿಜಯ್ `ಜನನಾಯಗನ್’ ಚಿತ್ರದ ದೃಶ್ಯಗಳು ಸೋರಿಕೆ : ನಿರ್ಮಾಣ ಸಂಸ್ಥೆಯ ಎಚ್ಚರಿಕೆ
ಟಿವಿಕೆ ನಾಯಕ, ಚಿತ್ರನಟ ವಿಜಯ್ ಅಭಿನಯದ `ಜನನಾಯಗನ್’ ಒಂದಲ್ಲ ಒಂದು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಲೇ ಇದೆ. ಈಗಾಗಲೇ ಬಿಡುಗಡೆ ವಿಳಂಬದ ಸಮಸ್ಯೆ ಎದುರಿಸಿದ ಈ ಚಿತ್ರ ಈಗ ಆನ್ಲೈನ್ನಲ್ಲಿ ಕೆಲ ದೃಶ್ಯಗಳ ಸೋರಿಕೆ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದೆ. ಹೀಗಾಗಿ ಇಂತಹ ಪೈರಸಿಗೆ ಬೆಂಬಲ ನೀಡಬಾರದು ಎಂದು ಚಿತ್ರತಂಡ ಮನವಿ ಮಾಡಿದೆ.
#JanaNayagan pic.twitter.com/wNLRSsmaHq
— KVN Productions (@KvnProductions) April 10, 2026
ಇನ್ನು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೆವಿಎಸ್ ಪ್ರೊಡಕ್ಷನ್ಸ್, ಈ ರೀತಿಯ ಸೋರಿಕೆಯಾದ ವಿಷಯವನ್ನು ಡೌನ್ಲೋಡ್ ಮಾಡುವುದು, ಸಂಗ್ರಹಿಸುವುದು, ವೀಕ್ಷಿಸುವುದು, ಬೇರೆಯವರೊಂದಿಗೆ ಹಂಚಿಕೊಳ್ಳುವುದು ಅಥವಾ ಅಪ್ಲೋಡ್ ಮಾಡುವುದು ಕ್ರಿಮಿನಲ್ ಅಪರಾಧ ಮತ್ತು ಕಾಪಿರೈಟ್ ಕಾನೂನು ಉಲ್ಲಂಘನೆ ಆಗುತ್ತದೆ. ಇದು ಕಾನೂನು ಸಮಸ್ಯೆ ತರಬಹುದು ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಸೋರಿಕೆಯಾದ ವಿಷಯಗಳನ್ನು ಬಳಸದಂತೆ ಚಿತ್ರ ನಿರ್ಮಾಪಕರು ಮನವಿ ಮಾಡಿದ್ದಾರೆ.



