Mollywood

ದೃಶ್ಯಂ 3 ಮೊದಲು ರಿಲೀಸ್ ಆಗುವುದು ಭಾರತದಲ್ಲಿ ಅಲ್ಲ!

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ ಲಾಲ್ ಅಭಿನಯದ ಬಹುನಿರೀಕ್ಷಿತ ದೃಶ್ಯಂ 3 ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮೋಹನ್‌ಲಾಲ್ ಅವರ ಹುಟ್ಟುಹಬ್ಬವಾದ ಮೇ 21 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ಹೀಗೆ ರಿಲೀಸ್ ಆಗುತ್ತಿರುವ ಈ ಚಿತ್ರ ಮೊದಲು ಬಿಡುಗಡೆಯಾಗುತ್ತಿರುವುದು ಭಾರತದಲ್ಲಿ ಅಲ್ಲ, ಬದಲಾಗಿ ಅಮೇರಿಕಾದಲ್ಲಿ!

ದೃಶ್ಯಂ ಫ್ರಾಂಚೈಸ್‌ನ ಮೂರನೇ ಕಂತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ತನ್ನ ಮೊದಲ ಪ್ರದರ್ಶನವನ್ನು ಪ್ರದರ್ಶಿಸಲಿದೆ ಎಂದು ತಯಾರಕರು ತಿಳಿಸಿದ್ದಾರೆ. “ಜಾರ್ಜ್‌ಕುಟ್ಟಿ ತನ್ನ ಮೊದಲ ಹೆಜ್ಜೆ ಇಡುತ್ತಾನೆ… ಯುಎಸ್‌ಎಯಲ್ಲಿ. ದೃಶ್ಯಂ 3 ವಿಶ್ವದ ಮೊದಲ ಪ್ರದರ್ಶನ ಯುಎಸ್‌ಎಯಲ್ಲಿ ಪ್ರಾರಂಭವಾಗುತ್ತದೆ, ಮೇ 20 ರಂದು ಸಂಜೆ 7:30 PST ಗೆ ಪ್ರಥಮ ಪ್ರದರ್ಶನಗೊಳ್ಳುತ್ತದೆ” ಎಂದು ಚಿತ್ರ ನಿರ್ಮಾತೃಗಳು ಹೇಳಿದ್ದಾರೆ.


ಈ ಚಿತ್ರದಲ್ಲಿ ಮೋಹನ್‌ಲಾಲ್ ಅವರೊಂದಿಗೆ ಮೀನಾ, ಎಸ್ತರ್ ಅನಿಲ್, ಅನ್ಸಿಬಾ ಹಸನ್, ಮುರಳಿ ಗೋಪಿ, ಸಿದ್ದಿಕ್ ಮತ್ತು ಆಶಾ ಶರತ್ ಸೇರಿದಂತೆ ಹಲವರು ನಟಿಸಿದ್ದಾರೆ.

Show More

Leave a Reply

Your email address will not be published. Required fields are marked *

Back to top button