Mollywood

ಬಾಕ್ಸ್ ಆಫೀಸ್‍ನಲ್ಲಿ 200 ಕೋಟಿ ರೂಪಾಯಿ ಗಳಿಸಿದ ದೃಶ್ಯಂ 3 : ಮೋಹನ್ ಲಾಲ್ ಕೃತಜ್ಞತೆ

ಕಳೆದ ವಾರ ಬಿಡುಗಡೆಯಾಗಿದ್ದ ಮೋಹನ್ ಲಾಲ್ ಅಭಿನಯದ ಮಲಯಾಳಂ ಸಿನಿಮಾ `ದೃಶ್ಯಂ 3′ ವಿಶ್ವದಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ 200 ಕೋಟಿ ರೂಪಾಯಿ ಗಳಿಕೆಯನ್ನು ದಾಟಿದೆ. ಈ ಖುಷಿಯನ್ನು ಹಂಚಿಕೊಂಡಿರುವ ಮೋಹನ್ ಲಾಲ್ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮೋಹನ್ ಲಾಲ್ `ಮೂರು ಚಿತ್ರಗಳು. ಮೂರು ಅಧ್ಯಾಯಗಳು. ಒಂದು ಮುರಿಯದ ಬಂಧ. ಜಾರ್ಜ್‍ಕುಟ್ಟಿ ಮತ್ತು ಕುಟುಂಬದೊಂದಿಗೆ ನಡೆದಿದ್ದಕ್ಕಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.


ಜೀತು ಜೋಸೆಫ್ ನಿರ್ದೇಶಿಸಿದ ಈ ಸಿನಿಮಾ ಈ ಸರಣಿಯ ಮೂರನೇ ಹಾಗೂ ಕೊನೆಯ ಅಧ್ಯಾಯವಾಗಿದೆ. ಮೋಹನ್ ಲಾಲ್ ಅವರ ಜನ್ಮದಿನದಂದು ಮೇ 21, 2026 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

Show More

Leave a Reply

Your email address will not be published. Required fields are marked *

Back to top button