Automobile

ವಾರ್ಷಿಕ 10 ಲಕ್ಷ ಕಾರುಗಳನ್ನು ಉತ್ಪಾದಿಸಲಿದೆ ಮಾರುತಿ ಸುಜುಕಿಯ ಈ ಘಟಕ

ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಮಾರುತಿ ಸುಜುಕಿ ತನ್ನ ಮತ್ತೊಂದು ಪ್ರಮುಖ ಉತ್ಪಾದನಾ ಮೈಲುಗಲ್ಲನ್ನು ತಲುಪಿದೆ. ಸದ್ಯ ಕಂಪನಿಯು ಗುಜರಾತ್‍ನಲ್ಲಿರುವ ತನ್ನ ಹನ್ಸಲ್‍ಪುರ ಘಟಕದ ನಾಲ್ಕನೇ ಸ್ಥಾವರದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಮೂಲಕ ಈ ಘಟಕದ ವಾರ್ಷಿಕ ಉತ್ಪಾದನಾ ಸಾಮಥ್ರ್ಯ 10 ಲಕ್ಷ ವಾಹನಗಳಿಗೆ ಏರಿಕೆಯಾಗಿದೆ.

ಹೊಸದಾಗಿ ಕಾರ್ಯಾರಂಭ ಮಾಡಿದ ಸ್ಥಾವರ ಡಿ ವಾರ್ಷಿಕ 2.5 ಲಕ್ಷ ಯೂನಿಟ್‍ಗಳ ಸಾಮಥ್ರ್ಯವನ್ನು ಹೊಂದಿದೆ. ಈ ಹೊಸ ಸ್ಥಾವರದ ವಿಸ್ತರಣೆಗೆ ಮುನ್ನ ಹನ್ಸಲ್‍ಪುರ ಸಂಕೀರ್ಣದಲ್ಲಿ ವಾರ್ಷಿಕವಾಗಿ 7.5 ಲಕ್ಷ ವಾಹನಗಳನ್ನು ನಿರ್ಮಿಸಬಹುದಿತ್ತು. ಈಗ ಇದಕ್ಕೆ ಹೆಚ್ಚುವರಿ 2.5 ಲಕ್ಷ ಯೂನಿಟ್‍ಗಳು ಸೇರ್ಪಡೆಯಾಗಿದ್ದು, ಸ್ಥಾವರ ಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಒಟ್ಟು ಸಾಮರ್ಥ್ಯವು 10 ಲಕ್ಷ ಯೂನಿಟ್‍ಗಳಿಗೆ ಏರಿದೆ.

ಹೊಸ ಸ್ಥಾವರವು ಆರಂಭದಲ್ಲಿ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಎಸ್‍ಯುವಿ ಇ ವಿಟಾರಾವನ್ನು ತಯಾರಿಸುತ್ತದೆ. ಹನ್ಸಲ್‍ಪುರ ಘಟಕವು ಈಗಾಗಲೇ ಬಲೆನೊ, ಫ್ರಾಂಕ್ಸ್ ಮತ್ತು ಸ್ವಿಫ್ಟ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು ಕಂಪನಿಗೆ ಪ್ರಮುಖ ರಫ್ತು ನೆಲೆಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button