Automobile

ಬಿರು ಬೇಸಿಗೆಯಲ್ಲಿ ನಿಮ್ಮ ಕಾರನ್ನು ತಂಪಾಗಿ ಇರಿಸುವುದು ಹೇಗೆ?

ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ. ಕೆಲವೆಡೆ ಈ ತಾಪಮಾನದ ಏರಿಕೆ ಅಸಹನೀಯವಾಗಿದೆ. ಪರಿಸ್ಥಿತಿ ಹೀಗಿರುವಾಗ ನಿಮ್ಮ ಕಾರುಗಳನ್ನು ತಂಪಾಗಿ ಇರಿಸುವುದೂ ಬಲು ಮುಖ್ಯ. ಯಾಕೆಂದರೆ ತೀವ್ರವಾದ ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ವಿಂಡ್‌ಶೀಲ್ಡ್ ಬಿರುಕುಗಳು, ಬಣ್ಣ ಮಾಸುವುದು ಅಥವಾ ಚಾಲನೆ ಮಾಡಲು ಅನಾನುಕೂಲವಾಗುವುದು ಸೇರಿದಂತೆ ಕಾರಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ ಬೇಸಿಗೆಯಲ್ಲಿ ನಿಮ್ಮ ಕಾರನ್ನು ತಂಪಾಗಿ ಇರಿಸಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು:

  • ಸಾಧ್ಯವಾದಷ್ಟು ನಿಮ್ಮ ವಾಹನವನ್ನು ನೆರಳಿನಲ್ಲಿ ಪಾರ್ಕ್ ಮಾಡಿ
  • ಕಾರನ್ನು ನೇರವಾಗಿ ಸೂರ್ಯನ ಕಿರಣಗಳಲ್ಲಿ ನಿಲ್ಲಿಸಿದಾಗ ಕ್ರಾಸ್-ವೆಂಟಿಲೇಷನ್‌ಗೆ ಸಹಾಯ ಮಾಡಲು ಕಾರಿನ ಕಿಟಕಿಗಳನ್ನು ಸ್ವಲ್ಪ ತೆರೆದಿಡುವುದು ಸೂಕ್ತ. ಆದರೆ ಇದು ಸಂಭಾವ್ಯ ಭದ್ರತಾ ಅಪಾಯವನ್ನು ಉಂಟು ಮಾಡಬಹುದಾಗಿದ್ದರಿಂದ ಕಿಟಕಿ ಜಾಸ್ತಿ ತೆಗೆಯದಂತೆ ನೋಡಿಕೊಳ್ಳಿ
  • ಸನ್‌ಶೇಡ್ ಮತ್ತು ವಿಂಡೋ ವೈಸರ್‌ಗಳಂತಹ ಪರಿಕರಗಳನ್ನು ಬಳಸಿ. ಇವು ಕಿಟಕಿಗಳ ಮೂಲಕ ಗಣನೀಯ ಪ್ರಮಾಣದ ಸೂರ್ಯನ ಬೆಳಕನ್ನು ತಡೆಯುತ್ತವೆ
  • ಬಿಸಿಲಿನಲ್ಲಿ ಕಾರು ಪಾರ್ಕ್ ಮಾಡಿದ್ದಾಗ ಸ್ಟೀರಿಂಗ್ ವ್ಹೀಲ್ ಅನ್ನು ಟವೆಲ್‌ನಿಂದ ಮುಚ್ಚಿಡಿ. ಇದೂ ಸ್ಪರ್ಶಕ್ಕೆ ಹೆಚ್ಚು ಆರಾಮದಾಯಕವಾಗಿರುತ್ತದೆ
Show More

Related Articles

Leave a Reply

Your email address will not be published. Required fields are marked *

Back to top button