Smallest River In India : ಭಾರತದ ಚಿಕ್ಕ ನದಿ ಯಾವುದು? : ಎಲ್ಲಿದೆ ಈ ಸುಂದರ ನದಿ?
ಭಾರತದಲ್ಲಿ ಸಾಕಷ್ಟು ನದಿಗಳಿವೆ. ಈ ಎಲ್ಲಾ ನದಿಗಳು ತನ್ನದೇ ಆದ ವಿಶೇಷತೆ, ಖ್ಯಾತಿ, ವ್ಯಾಪ್ತಿಯನ್ನು ಹೊಂದಿವೆ. ಆದರೆ ಭಾರತದ ಅತ್ಯಂತ ಚಿಕ್ಕ ನದಿಯೂ ಒಂದಿದೆ. ಇದು ಉದ್ದದಲ್ಲಿ ಚಿಕ್ಕದಾಗಿದ್ದರೂ ತನ್ನ ಗುಣಲಕ್ಷಣ, ಉಲ್ಲಾಸದಾಯಕ ಅನುಭವ ನೀಡುವ ವಿಷಯದಲ್ಲಿ ಶ್ರೀಮಂತವಾಗಿದೆ.
ಅತ್ಯಂತ ಚಿಕ್ಕ ನದಿ
ಭಾರತದ ಅತ್ಯಂತ ಚಿಕ್ಕ ನದಿ ಅರ್ವರಿ. ಇದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮೂಲಕ ಹರಿಯುತ್ತದೆ. ಈ ನದಿ ಅರಾವಳಿ ಬೆಟ್ಟಗಳಲ್ಲಿ ಹುಟ್ಟುತ್ತದೆ. ಹೀಗೆ ಹುಟ್ಟಿದ ಅರ್ವರಿ ನದಿ ಸರಿಸುಮಾರು 45 ಕಿಲೋಮೀಟರ್ ವಿಸ್ತರಿಸಿದೆ. ಇದು ಬಳಿಕ ಸರ್ಸಾ ನದಿಯೊಂದಿಗೆ ಸೇರುತ್ತದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಈ ನದಿ ಈ ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಈ ಭಾಗದ ಕೃಷಿಗೆ, ಅಂತರ್ಜಲ ಮಟ್ಟ ಹೆಚ್ಚಿಸಲು ಸಹಾಯ ಮಾಡುವ ಜೊತೆಗೆ ಹಲವಾರು ಹಳ್ಳಿಗಳಿಗೂ ಆಧಾರವಾಗಿದೆ.

ನದಿ ಉಳಿವಿಗೆ ಒಂದಾದ ಜನರು
ಈ ನದಿ ಇಂದು ಜನರ ಪ್ರಯತ್ನದಿಂದ ಉಳಿದಿದೆ ಎಂಬುದು ಸತ್ಯ. ಯಾಕೆಂದರೆ 20ನೇ ಶತಮಾನದ ಅಂತ್ಯದ ವೇಳೆಗೆ ಅರಣ್ಯನಾಶ ಮತ್ತು ಅತಿಯಾದ ನೀರಿನ ಹೊರತೆಗೆಯುವಿಕೆಯಿಂದಾಗಿ ಅರ್ವರಿ ಬಹುತೇಕ ಬತ್ತಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಸಾಂಪ್ರದಾಯಿಕ ಮಳೆನೀರು ಕೊಯ್ಲು ರಚನೆಗಳನ್ನು ಬಳಸಿಕೊಂಡು ನದಿಯನ್ನು ಪುನರುಜ್ಜೀವನಗೊಳಿಸಿದರು. ಇದರಿಂದ ಅರ್ವರಿ ಮತ್ತೆ ಜೀವಕಳೆಯನ್ನು ಪಡೆದುಕೊಂಡಿತ್ತು.
ಇಲ್ಲಿಗೆ ಭೇಟಿ ನೀಡಿ
ರಾಜಸ್ಥಾನದ ಪ್ರವಾಸ ಕೈಗೊಂಡಾಗ ನೀವು ಇಲ್ಲಿಗೂ ಭೇಟಿ ನೀಡಬಹುದು. ಇಲ್ಲಿನ ಸುಂದರ ಹಳ್ಳಿಗಳು, ಭೂದೃಶ್ಯಗಳು ಕಣ್ಮನ ಸೆಳೆಯುತ್ತವೆ. ಅರಾವಳಿ ಬೆಟ್ಟಗಳಲ್ಲಿ ಪ್ರಕೃತಿ ನಡಿಗೆಗಳೂ ಹೊಸ ಅನುಭವ ತರುತ್ತದೆ. ಇಲ್ಲಿಂದ ನೀವು ಸರಿಸ್ಕಾ ಹುಲಿ ಅಭಯಾರಣ್ಯ, ಭಂಗಢ ಕೋಟೆ, ಸಿಲಿಸೆರ್ಹ್ ಲೇಕ್ ಪ್ಯಾಲೇಸ್, ಅಲ್ವಾರ್ ಸಿಟಿ ಪ್ಯಾಲೇಸ್‍ಗೂ ಭೇಟಿ ನೀಡಬಹುದು.



