Tollywood
ರಶ್ಮಿಕಾ ಮಂದಣ್ಣರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ
ಹೈದರಾಬಾದ್ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ `ದಿ ಗರ್ಲ್ಫ್ರೆಂಡ್’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ತೆಲಂಗಾಣದ ಗದ್ದರ್ ಚಲನÀಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟರಾದ ರಾಮ್ ಚರಣ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಂದ ರಶ್ಮಿಕಾ ಪ್ರಶಸ್ತಿ ಸ್ವೀಕರಿಸಿದ್ದಾರೆ.
View this post on Instagram
ತೆಲಂಗಾಣ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರಶ್ಮಿಕಾ, ಆಗ, ನಾನು ನಿಮ್ಮ ಮುಂದೆ ಮಗಳಾಗಿ ಬಂದಿದ್ದೆ. ಇಂದು, ನಾನು ನಿಮ್ಮ ಮುಂದೆ ಸೊಸೆಯಾಗಿ ನಿಂತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
View this post on Instagram
ಅತ್ತೆ ಮಾಧವಿ ದೇವರಕೊಂಡ ಅವರೊಂದಿಗೆ ಸಮಾರಂಭಕ್ಕೆ ಬಂದಿದ್ದ ರಶ್ಮಿಕಾ ಈ ಖುಷಿಯ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.



